ಸವಣೂರು: ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ ಹೊಡೆದ ಘಟನೆ ಕಾಣಿಯೂರು ಮಂಜೇಶ್ವರ ಅಂತಾರಾಜ್ಯ ರಸ್ತೆಯ ಸವಣೂರಿನಿಂದ ಕೊಂಚ ಮುಂದಿನ ತಿರುವಿನಲ್ಲಿ ನಡೆದಿದ್ದು ಘಟನೆ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಮೃತ ಯುವಕನನ್ನು ಮಿತ್ತೂರು ಮೂಲದವರು ಎಂದು ಹೇಳಲಾಗುತ್ತಿದ್ದು ಇನ್ನೋರ್ವ ಸವಾರ ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.


























