ಪುತ್ತೂರು: ರೋಟರಿ ಕ್ಲಬ್ ಪುತ್ತೂರು, ಪುತ್ತೂರು ರೋಟರಿ ಮ್ಯಾಮೋಗ್ರಫಿ ಸೆಂಟರ್ ಮತ್ತು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಪುತ್ತೂರು ಇದರ ಸಹಯೋಗದೊಂದಿಗೆ ಉಚಿತ ಮಾಸಿಕ ಆರೋಗ್ಯ ತಪಾಸಣಾ ಶಿಬಿರವು ಮೇ. ಈ ರಂದು ಜರುಗಲಿದೆ. ರಕ್ತದೊತ್ತಡ, ಸಕ್ಕರೆಕಾಯಿಲೆ, ಮಕ್ಕಳ ಆರೋಗ್ಯ ತಪಾಸಣೆ, ಹೃದಯ ತಪಾಸಣೆಗಾಗಿ ಇ.ಸಿ.ಜಿ , ಸ್ತನ ಕಾಯಿಲೆ ತಪಾಸಣೆ, ಮ್ಯಾಮೋಗ್ರಫಿ ಸ್ಕ್ಯಾನಿಂಗ್ ಹಾಗೂ ಮೇ. 3 ರಂದು ಉಚಿತ ಬಂಜೆತನ ತಪಾಸಣಾ ಶಿಬಿರವು ನಡೆಯಲಿದ್ದು ಅಗತ್ಯವುಳ್ಳವರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9483787876, 9448126326, 9483127777 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಯು. ಶ್ರೀಪತಿ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























