ಕಡಬ: ಮೇ 1, 2026ರಂದು ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ.17/2026 (ಕಲಂ 194 BNSS-2023) ಅಡಿಯಲ್ಲಿ ದಾಖಲಾಗಿದ್ದ ಸಾವಿನ ಪ್ರಕರಣವು ಇದೀಗ ಹೊಸ ತಿರುವು ಪಡೆದಿದೆ.
ಪ್ರಾರಂಭದಲ್ಲಿ, ಕಡಬ ಕಡ್ಯ ನಿವಾಸಿ ರವಿಚಂದ್ರ ಅವರು ನೀಡಿದ ದೂರಿನ ಪ್ರಕಾರ, ಮೃತ ಚೆನ್ನಪ್ಪ ಪೂಜಾರಿಯವರ ಸಾವಿನಲ್ಲಿ ಯಾವುದೇ ಅನುಮಾನಾಸ್ಪದ ಅಂಶ ಕಾಣಿಸದ ಕಾರಣ ಇದನ್ನು ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಲಾಗಿತ್ತು.
ಆದರೆ, ತನಿಖೆಯ ಪ್ರಾರಂಭಿಕ ಹಂತದಲ್ಲಿ ಕೆಲವು ಅನುಮಾನಕಾರಿ ವಿಚಾರಗಳು ಬೆಳಕಿಗೆ ಬಂದಿವೆ. ಚೆನ್ನಪ್ಪ ಪೂಜಾರಿಯವರು ಆತ್ಮಹತ್ಯೆ ಮಾಡಿಕೊಂಡಿದ್ದ ಕೋಣೆಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿರಲಿಲ್ಲ. ಜೊತೆಗೆ, ಅವರ ಜೇಬಿನಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದೆ.
ಈ ಬೆಳವಣಿಗೆಗಳ ಹಿನ್ನೆಲೆ, ಪಿರ್ಯಾದಿದಾರರಾದ ರವಿಚಂದ್ರ ಅವರು ಮೇ 3, 2026ರಂದು ಮರುದೂರು ನೀಡಿದ್ದು, ಅದರ ಆಧಾರದ ಮೇಲೆ ಕಡಬ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ 56/2026, ಕಲಂ 108 BNS-2023 ಅಡಿಯಲ್ಲಿ ಹೊಸ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ನಿಜಾಂಶ ಪತ್ತೆಗಾಗಿ ಪೊಲೀಸರು ಸದ್ಯ ತನಿಖೆ ಮುಂದುವರಿಸಿದ್ದಾರೆ.



























