ವಿಟ್ಲ ಶಿಬರಿ ಮಹಿಳಾ ಮಂಡಲ ಮಾಡತ್ತಡ್ಕ ಹಾಗೂ ಶಿಬರಿ ಯುವಕ ಮಂಡಲ (ರಿ.)ಮಾಡತ್ತಡ್ಕ ವತಿಯಿಂದ ಇದೇ ಮೊದಲ ಬಾರಿಗೆ ಆಟಿಡೊಂಜಿ ಕೂಟ ಕಾರ್ಯಕ್ರಮವು ವಿಟ್ಲ ಮಾಡತ್ತಡ್ಕ ಶಾಲಾ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬಡತನದಲ್ಲಿರುವ 10 ಮಕ್ಕಳನ್ನು ಗುರುತಿಸಿ , ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗುವಂತೆ ಧನ ಸಹಾಯ ನೀಡಲಾಯಿತು. ಹಾಗೂ ದಿವಂಗತ ಐತಪ್ಪ ರವರ ಧರ್ಮಪತ್ನಿ ಪ್ರೇಮ ಮಾಡತ್ತಡ್ಕ ಅವರಿಗೆ ಹತ್ತು ಸಾವಿರ ರೂಪಾಯಿ ಧನ ಸಹಾಯ ನೀಡಲಾಯಿತು ಹಾಗೂ ಊರಿನ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು,ಶಿಬರಿ ಮಹಿಳಾ ಮಂಡಲದ ಮಹಿಳೆಯರಿಂದ 45 ರೀತಿಯ ಬಗೆ ಬಗೆಯ ತಿನಿಸು ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಶಿಬರಿ ಮಹಿಳಾ ಮಂಡಲದ ಅಧ್ಯಕ್ಷರಾದ ಅನಿತಾ ಪ್ರೇಮನಾಥ ಹಾಗೂ ಶಿಬರಿ ಯುವಕ ಮಂಡಲ (ರಿ.)ಮಾಡತ್ತಡ್ಕ ದ ಅಧ್ಯಕ್ಷರಾದ ಮನಮೋಹನ ಪೈಸಾರಿ ಹಾಗೂ ಅತಿಥಿಗಳಾದ ಶ್ರೀ ಹೊನ್ನಪ್ಪ ಶೆಟ್ಟಿ ಹಾಗೂ ಯಶವಂತ ಬೋಳಿಗದ್ದೆ ಉದ್ಯಮಿಗಳು ಮಂಗಳೂರು ಮತ್ತು ಶ್ರೀಮತಿ ಜಲಜಾಕ್ಷಿ ಶ್ರೀ ಪದ್ಮಯ್ಯ ಗೌಡ ಪೈಸಾರಿ ಉಪಸ್ಥಿತರಿದ್ದರು
ವಿಶಾಲಾಕ್ಷಿ ಸ್ವಾಗತಿಸಿದರು ಸುಜಾತ ದರ್ಬೆ ವಂದಿಸಿದರು ಹರೀಶ್ ದರ್ಬೆ ನಿರೂಪಿಸಿದರು

























