ಸುಳ್ಯ:ವಿನೋಭಾನಗರದಲ್ಲಿ ಲಾರಿ ಡಿಕ್ಕಿಯಾಗಿ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಸೆ.19ರ ಸಂಜೆ ನಡೆದಿದೆ.
ಮೃತರನ್ನು ಪುತ್ತೂರು ಕೋಡಿಪಾಡಿ ನಿವಾಸಿ ದೀಪಕ್ ಎನ್.ಎಂದು ಗುರುತಿಸಲಾಗಿದೆ.
ಪತ್ರಿಕಾ ಪ್ರಕಟಣೆಯ ಪ್ರಕಾರ, ಬಂಟ್ವಾಳ ಕೆದಿಲ ನಿವಾಸಿ ಅಬ್ದುಲ್ ಲತೀಫ್** ಅವರು KA-01-AM-2449 ನೋಂದಣಿಯ ಲಾರಿಯನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ದೀಪಕ್ ಅವರಿಗೆ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.



























