‘ದೀಪಾವಳಿ ಜ್ಯೋತಿ ಪರ್ವ’ ಕಾರ್ಯಕ್ರಮದ ಅಂಗವಾಗಿ ಇನಾಯತ್ ಅಲಿ ಅವರು ಸಮಾಜಮುಖಿ ಕಾರ್ಯಕ್ಕೆ ವಿಶೇಷ ಆದ್ಯತೆ ನೀಡಿದರು. ಆರ್ಥಿಕವಾಗಿ ಸಂಕಷ್ಟದಲ್ಲಿರುವ 100 ಬಡ ಕುಟುಂಬಗಳ ಹೆಣ್ಣುಮಕ್ಕಳ ಮದುವೆಯ ಖರ್ಚಿಗೆ ನೆರವಾಗುವ ಉದ್ದೇಶದಿಂದ ಪ್ರತಿ ಕುಟುಂಬಕ್ಕೆ ತಲಾ ₹25,000ರಂತೆ ಒಟ್ಟು ₹25 ಲಕ್ಷ ಆರ್ಥಿಕ ಸಹಾಯವನ್ನು ವಿತರಿಸಿದರು.
ಹಬ್ಬದ ಸಂಭ್ರಮದ ನಡುವೆ ನೂರು ಕುಟುಂಬಗಳ ಬದುಕಿನಲ್ಲಿ ಸಂತಸದ ಬೆಳಕು ಮೂಡಿಸಿದ ಈ ಮಾನವೀಯ ಕಾರ್ಯವು ಕಾರ್ಯಕ್ರಮದ ಅತ್ಯಂತ ಅರ್ಥಪೂರ್ಣ ಕ್ಷಣವಾಗಿ ಮೂಡಿಬಂದಿತು. ಸಮಾಜದ ಪ್ರತಿಯೊಬ್ಬರ ಬದುಕಿನಲ್ಲೂ ಸಂತೋಷ ಮತ್ತು ನೆಮ್ಮದಿ ನೆಲೆಸಬೇಕು ಎಂಬ ಆಶಯಕ್ಕೆ ಈ ನೆರವು ಸಾಕ್ಷಿಯಾಯಿತು.


























