ಪುತ್ತೂರು: ದೇಶದ75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪುತ್ತೂರು ಜೇಸಿಐಯು ಹಿರಿಯ ಮಾಜಿ ಯೋಧ ರಮೇಶ್ ಬಾಬುರವರನ್ನು ಬಸ್ ನಿಲ್ದಾಣದ ಬಳಿಯ ಗಾಂಧಿಕಟ್ಟೆಯಲ್ಲಿ ಸನ್ಮಾನಿಸಲಾಯಿತು.
ಜೇಸಿಐ ಪೂರ್ವಾಧ್ಯಕ್ಷರು, ಗಾಂಧಿಕಟ್ಟೆ ಸಮಿತಿ ಸಂಚಾಲಕರಾದ ಕೃಷ್ಣ ಪ್ರಸಾದ್ ಆಳ್ವ ಸನ್ಮಾನಿಸಿ ಗೌರವಿಸಿದರು. ಪೂರ್ವಾಧ್ಯಕ್ಷ ಜಗನ್ನಾಥ ರೈ, ಅಧ್ಯಕ್ಷೆ ಸ್ವಾತಿ ಜೆ ರೈ, ಸದಸ್ಯೆ ಋತ್ವಿಕಾ, ಗಾಂಧಿಕಟ್ಟೆ ಸಮಿತಿ ಜತೆ ಕಾರ್ಯದರ್ಶಿ ಸಯ್ಯದ್ ಕಮಲ್, ಸೀತಾರಾಮ ಶೆಟ್ಟಿ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಗನ್ನಾಥ ರೈ ಹಾಗೂ ರಮೇಶ್ ಬಾಬು ಮಹಾತ್ಮ ಗಾಂಧಿ ಪ್ರತಿಮೆ ಹಾರಾರ್ಪಣೆ ಮಾಡಿದರು.




























