ಪುತ್ತೂರು: ಫ್ರೆಂಡ್ಸ್ ಕ್ಲಬ್ ಸೇಡಿಯಾಪು ವತಿಯಿಂದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಫ್ರೆಂಡ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಚಂದ್ರಶೇಖರ್ ಕುಲಾಲ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ,ಉದ್ಯಮಿ ಬಶೀರ್ ಹಾಜಿ ಅನಿಲಕೋಡಿ ,ಗ್ರಾಮ ಪಂಚಾಯತ್ ಸದಸ್ಯರಾದ ಯತೀಶ್,ಪೂರ್ಣಿಮಾ ಶೆಟ್ಟಿ, ತಾಲೂಕು ಆಶಾಕಾರ್ಯಕರ್ತೆಯರ ಮೇಲ್ವಿಚಾರಕಿ ಸುಜಾತಾ ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ದಳಿಯ ಹಿರಿಯರಾದ ಕೃಷ್ಣ ಪ್ರಭು ದಾರಂದಕುಕ್ಕು ,ಇಬ್ರಾಹಿಂ ಸೇಡಿಯಾಪು ,ಮೋನಪ್ಪ ಕುಲಾಲ್ ಬದಿಯಡ್ಕ ,ಚೆನ್ನಮ್ಮ ಸೇಡಿಯಾಪು ವಸಂತಿ ನಾಯಕ್ ದಾರಂದಕುಕ್ಕು, ಮೈಮುನಾ ಸೇಡಿಯಾಪು ,ಗಣೇಶ್ ಹೆಗ್ಡೆ ಸೇಡಿಯಾಪು , ಗಂಗಾಧರ ಕನ್ನಡ ಸೇಡಿಯಾಪು (ಯಕ್ಷಗಾನ ಕಲಾವಿದರು) , ಅಂಗನವಾಡಿ ಸಹಾಯಕಿ ವೀಣಾ ,ನಾಟಿ ನಾಟಿವೈದ್ಯ ದಮಯಂತಿ ಯಾನೆ ನಯನ ಕಾಪು ಮೊದಲಾದ ಸ್ಥಳೀಯ ಪ್ರಮುಖರನ್ನು ಅಭಿನಂದಿಸಲಾಯಿತು.
ಕ್ಲಬ್ ನ ಗೌರವ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಬದಿನಾರು ಸ್ವಾಗತಿಸಿ, ನಿರೂಪಿಸಿ, ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿಯಾದ ಸತೀಶ್ ಮಡಿವಾಳ, ಕೋಶಾಧಿಕಾರಿ ಪ್ರಜ್ವಲ್ ಕುಲಾಲ್, ಮಾಜಿ ಅಧ್ಯಕ್ಷರಾದ ಅಶೋಕ್ ಪ್ರಭು , ಅಬ್ಬಾಸ್ ಡಿ.ಕೆ ಮತ್ತು ಸ್ಥಳೀಯ ಅಂಗನವಾಡಿ ಪುಟಾಣಿಗಳು, ಪೋಷಕರು , ಸ್ತ್ರೀಶಕ್ತಿಯ ಸದಸ್ಯರು , ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.