ಪುತ್ತೂರು ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಅವರ ಕನಸಿನ ಕೂಸು ಹಾಗೂ ನಿರಂತರ ಪ್ರಯತ್ನದ ಫಲವಾಗಿ ಮಂಜೂರಾಗಿರುವ ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಗೆ ಸೂಕ್ತವಾದ ಲೋಗೋ ಮತ್ತು ಟ್ಯಾಗ್ ಲೈನ್ ( ಧ್ಯೇಯವಾಕ್ಯ) ರಚಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸೃಜನಶೀಲತೆ ಹೊಂದಿರುವ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಆಸಕ್ತರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದಾಗಿದೆ.
ಸ್ಪರ್ಧೆಯ ನಿಯಮಗಳು ಮತ್ತು ವಿವರಗಳು:
- ಲೋಗೋವು ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಆರೋಗ್ಯ ಸೇವೆಯನ್ನು ಪ್ರತಿಬಿಂಬಿಸುವಂತಿರಬೇಕು.
- ಲೋಗೋ ಜೊತೆಗೆ ನೀಡುವ ಟ್ಯಾಗ್ ಲೈನ್ ವೈದ್ಯಕೀಯ ಶಿಕ್ಷಣ, ಸಂಶೋಧನೆ, ಆರೋಗ್ಯ ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವಂತಿರಬೇಕು.
- ಲೋಗೋ ಮತ್ತು ಟ್ಯಾಗ್ ಲೈನ್ ಅನ್ನು A4 ಗಾತ್ರದ ಶೀಟ್‌ನಲ್ಲಿ ಸ್ಪಷ್ಟವಾಗಿ ವಿನ್ಯಾಸಗೊಳಿಸಿ ಸಲ್ಲಿಸಬೇಕು.
- ವಿನ್ಯಾಸ ವನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗಿ ವಿನಂತಿ
ಶಾಸಕರ ಕಛೇರಿ
ಪುತ್ತೂರು ಆಡಳಿತ ಸೌಧದ ಬಳಿ
ಪುತ್ತೂರು - ವಿನ್ಯಾಸ ತಲುಪುವ ಕೊನೆಯ ದಿನಾಂಕ 20-06-2026
- ಆಯ್ಕೆಯಾದ ವಿನ್ಯಾಸಕ್ಕೆ ಸೂಕ್ತ ಬಹುಮಾನ ನೀಡಲಾಗುವುದು.
ಪುತ್ತೂರಿನ ಹೆಮ್ಮೆಯ ಈ ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆಗೆ ಒಂದು ವಿಶಿಷ್ಟ ಗುರುತನ್ನು ನೀಡುವ ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ. ::



























