ಪುತ್ತೂರು: ಅರುಣ ಸಾರಥಿ ಸಂಘಟನೆಯ ಮಾಸಿಕ ಸಭೆಯು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕಚೇರಿಯಲ್ಲಿ ಟ್ರಸ್ಟ್ನ ಸಂಚಾಲಕ ಅರುಣ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘಟನೆಯ ಮುಂದಿನ ಕಾರ್ಯವೈಖರಿಗಳ ಕುರಿತು ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಅರುಣ ಸಾರಥಿ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುತ್ತೂರು ತಾಲೂಕು ತೆಂಕಿಲ ನಿವಾಸಿ ಚಿರಾಗ್ ಅವರಿಗೆ 10 ಸಾವಿರ ರೂ. ಧನಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ನ ಸಹ ಸಂಘಟನಾ ಕಾರ್ಯದರ್ಶಿ ಅನಿಲ್ ತೆಂಕಿಲ, ಮನೀಶ್ ಕುಲಾಲ್, ಅರುಣ ಸಾರಥಿ ಸಂಘಟನೆಯ ಅಧ್ಯಕ್ಷ ಸಂದೇಶ್ ನಾಯಕ್ ಕೆಯ್ಯೂರು, ಪ್ರಧಾನ ಕಾರ್ಯದರ್ಶಿ ಸಚಿನ್ ವಳತ್ತಡ್ಕ, ಕೋಶಾಧಿಕಾರಿ ಶಿವಪ್ರಸಾದ್ ಮುಕ್ರಂಪಾಡಿ, ಸದಸ್ಯರಾದ ತೀರ್ಥರಾಮ ಜಿಡೆಕಲ್ಲು, ಸ್ವಸ್ತಿಕ್ ಗೌಡ ತಾರಿಗುಡ್ಡೆ, ಚಂದ್ರಶೇಖರ ರಾಗಿದಕುಮೇರು, ಯತೀಶ್ ಮಚ್ಚಿಮಲೆ, ಗುರುಪ್ರಸಾದ್ ದೊಡ್ಡಡ್ಕ, ಸುರೇಶ್ ಬಂಗಾರಡ್ಕ, ಕೇಶವ ನಾಯ್ಕ್ ರೈಲ್ವೇ, ಸತೀಶ್ ಡಿ. ಕುಂಬ್ರ, ಅಶೋಕ ಬಿ., ಬಾಲಕೃಷ್ಣ ಬಲ್ನಾಡು, ದಿನೇಶ್ ಮಣಿಯಾಣಿ, ರವಿಚಂದ್ರ, ಪ್ರವೀಣ್ ಕೆಮ್ಮಾಯಿ ಮೊದಲಾದವರು ಉಪಸ್ಥಿತರಿದ್ದರು.


























