ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ನಿವಾಸಿ
ಅಬ್ದುಲ್ಲಾ ಹಾಜಿ ಅವರ ಪುತ್ರ, ರಿಕ್ಷಾ ಚಾಲಕ ಸಲೀಮ್ ಮುಕ್ವೆ(45) ಅವರು ಹೃದಯಾಘಾತದಿಂದ ನ.1ರಂದು ಬೆಳಗ್ಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು.
ಸಮಾಜ ಸೇವಕರಾಗಿರುವ ಇವರು ಮುಕ್ವೆ ಬೂತ್ ಕಾಂಗ್ರೆಸ್ ಅಧ್ಯಕ್ಷರಾಗಿ, ಮುಕ್ವೆ ಹಿರಿಯ ಪ್ರಾಥಮಿಕ
ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಹಾಗೂ ಎಸ್ಕೆಎಸ್ಎಸ್ಎಫ್ನ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಸೋನಿ ಕ್ರಿಕೆಟರ್ಸ್ನ ಸ್ಥಾಪಕ ಸದಸ್ಯರಾಗಿದ್ದ ಅವರು ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ತಂದೆ, ಐವರು ಸಹೋದರರು, ನಾಲ್ವರು ಸಹೋದರಿಯರು, ಪತ್ನಿ ಹಾಗೂ ಪುತ್ರಿಯನ್ನು ಆಗಲಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈ ಸಹಿತ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.
























