ಉಪ್ಪಿನಂಗಡಿ: ಉರುವಾಲು ಗ್ರಾಮದ ಅಡೆಂಕಿಲ ಪಲ್ಕೆ ಎಂಬಲ್ಲಿ ಸಾರ್ವಜನಿಕ ಗುಡ್ಡದಲ್ಲಿ ಅಕ್ರಮವಾಗಿ ಕೋಳಿ ಅಂಕವನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ ಎರಡು ಕೋಳಿಗಳನ್ನು ವಶಪಡಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಅನಿಲ್, ಸುರೇಶ, ಯಶೋಧರ ಮತ್ತು ನಿಶಾಂತ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.
ಅ.31ರಂದು ಸಂಜೆ ಎಎಸ್ಐ ದಾಮೋದರ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಸ್ಥಳದಿಂದ ಎರಡು ಹುಂಜ, ಬಾಲು, ನೈಲಾನ್ ಹಗ್ಗ ಮತ್ತು ಚೀಲವನ್ನು ವಶಪಡಿಸಿಕೊಂಡಿದೆ.


























