ಪುತ್ತೂರು: ಹಿಂದು ಜಾಗರಣ ವೇದಿಕೆ ಆನಡ್ಕ ಘಟಕದ ವತಿಯಿಂದ ಭಾರತ್ ಮಾತ ಪೂಜನಾ ಕಾರ್ಯಕ್ರಮ ಮತ್ತು ನೂತನ ಪದಾಧಿಕಾರಿಗಳ ಘೋಷಣೆಯು ಶಿವಕುಮಾರ್ ಆನಡ್ಕ ರವರ ಮನೆಯ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಅಧ್ಯಕ್ಷರಾದ ಅಶೋಕ್ ತ್ಯಾಗರಾಜನಗರ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಘಟಕದ ಪುನರ್ ರಚನೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಶಿವಕುಮಾರ್ ಆನಡ್ಕ ಅವರನ್ನು ನಿಯುಕ್ತಿಗೊಳಿಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ನಿತಿನ್, ಕಾರ್ಯದರ್ಶಿಯಾಗಿ ಸುರೇಶ್ ಮಜಲು, ಶಿವರಾಜ್, ಅರುಣ್ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿಂಜಾವೇ ಜಿಲ್ಲಾ ಮಾತೃ ಸುರಕ್ಷ ಪ್ರಮುಖರಾದ ರಾಜೇಶ್ ಪಂಚೊಡಿ, ಹಿಂಜಾವೇ ಪುತ್ತೂರು ತಾಲೂಕು ಅಧ್ಯಕ್ಷರಾದ ಅಶೋಕ್ ತ್ಯಾಗರಾಜನಗರ, ಹಿಂಜಾವೇ ಪುತ್ತೂರು ತಾಲೂಕು ಇದರ ಸಂಪರ್ಕ ಪ್ರಮುಖರಾದ ದಿನೇಶ್.ಪಿ,ನರಿಮೊಗರು ಗ್ರಾಮ ಪಂಚಾಯತ್ ಸದಸ್ಯರುಗಳಾದ ದಿನೇಶ್ ಮಜಲು, ತಾರಾನಾಥ್ ಆನಡ್ಕ ಹಾಗೂ ಘಟಕದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.


