ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ವಿದ್ಯಾಮಾತ ಅಕಾಡೆಮಿ- ಪುತ್ತೂರು ಇದರ ವತಿಯಿಂದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ-2021 ಕ್ಕೆ ಅರ್ಜಿ ಸಲ್ಲಿಸಿ ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಮತ್ತು ಮುಂದಿನ ನೇಮಕಾತಿಗೆ ಪೂರ್ವ ತಯಾರಿ ನಡೆಸುತ್ತಿರುವವರಿಗಾಗಿ ಲಿಖಿತ ಪರೀಕ್ಷೆಗೆ ಪೂರ್ವ ತಯಾರಿ ತರಗತಿಯ ಉದ್ಘಾಟನೆ ನಡೆಯಿತು.
ಈ ಸಂದರ್ಭದಲ್ಲಿ ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ ಶೆಟ್ಟಿ ರವರು ಕಾರ್ಯಕ್ರಮ ಉದ್ಘಾಟಿಸಿ “ವಿದ್ಯಾಮಾತ ಅಕಾಡೆಮಿಯ ಮಾತೃ ಸಂಸ್ಥೆ ವಿದ್ಯಾಮಾತ ಫೌಂಡೇಶನ್ ಮೂಲಕ ಹಲವಾರು ಉದ್ಯೋಗ ಮೇಳಗಳಿಂದ ಸಾವಿರಾರು ಯುವಕ ಯುವತಿಯರು ಬೆಂಗಳೂರು , ಮಂಗಳೂರು , ಮುಂಬೈ ಮತ್ತು ಸ್ಥಳೀಯವಾಗಿ ಖಾಸಗಿ ಉದ್ಯೋಗ ಪಡೆದುಕೊಂಡಿರುವುದನ್ನು ಸ್ಮರಿಸಿಕೊಂಡರು ಹಾಗೂ ಸದ್ಯ ವಿದ್ಯಾಮಾತ ಅಕಾಡೆಮಿ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿರುವ ಸ್ಥಾಪಕರಾದ ಭಾಗ್ಯೇಶ್ ರೈ ಮತ್ತು ಸಂಸ್ಥೆಯ ತರಬೇತುದಾರರನ್ನು ಪ್ರಶಂಸಿದರು ಮತ್ತು ಪ್ರಯೋಜನ ಪಡೆದುಕೊಳ್ಳುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು.
- ಈ ತರಬೇತಿಯು ಒಂದು ತಿಂಗಳು ನಡೆಯಲಿದ್ದು, ಬೆಳಿಗ್ಗೆ 09ರಿಂದ ಮದ್ಯಾಹ್ನ 01ರವರೆಗೆ ನೇರ ತರಗತಿಗಳು ನಡೆಯುತ್ತದೆ.
- ಸಾಯಂಕಾಲ 06ರಿಂದ ರಾತ್ರಿ 08ರವರೆಗೆ ಆನ್ಲೈನ್ ತರಗತಿಗಳು ನಡೆಯಲಿದೆ.
- ನೇಮಕಾತಿ ಸಂಬಂಧಿಸಿದಂತೆ ಪ್ರತಿ ವಿಷಯಗಳಿಗೂ ಪ್ರತ್ಯೇಕವಾಗಿ ತರಬೇತುದಾರರನ್ನು ನೇಮಿಸಿದ್ದು , ಭಾರತದ ಸಂವಿಧಾನ-ಕಾನೂನು ಸುವ್ಯವಸ್ಥೆ ಆದರಿಸಿ ವಿಶೇಷ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ.
- ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಪಾಸಾದವರಿಗೆ ತರಬೇತಿ ಸಂಪೂರ್ಣ ಉಚಿತವಿದ್ದು, ಮುಂದೆ ಪೂರ್ವ ತಯಾರಿ ಮಾಡುತ್ತಿರುವವರಿಗೆ ತರಬೇತುದಾರರಿಗೆ ಗೌರವ ಧನವನ್ನಷ್ಟೇ ವಿಧಿಸಲಾಗುವುದು ಎಂದು ವಿದ್ಯಾಮಾತದ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಮಾಹಿತಿ ನೀಡಿದರು.
ತರಬೇತಿಯಲ್ಲಿ ಪಾಲ್ಗೊಳ್ಳುವವರು ದಿನಾಂಕ 23-08-2021ರ ಒಳಗಾಗಿ ವಿದ್ಯಾಮಾತ ಅಕಾಡೆಮಿ , ಹಿಂದುಸ್ತಾನ್ ಕಾಂಪ್ಲೆಕ್ಸ್ , ಎಪಿಎಂಸಿ ರಸ್ತೆ, ಪುತ್ತೂರು ಇಲ್ಲಿಗೆ ಭೇಟಿ ಕೊಟ್ಟು ಪ್ರವೇಶಾತಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ:8590773486 ಗೆ ಕರೆಮಾಡಬಹುದಾಗಿದೆ.



























