ಪುತ್ತೂರು: ಪುತ್ತೂರಿನಲ್ಲಿದ್ದ ಪ್ರತಿಷ್ಠಿತ ದಿನೇಶ್ ಬೇಕರಿಯ ಮಾಲಕ ಪಡೀಲ್ ನಿವಾಸಿ ಐತಪ್ಪ ಭಂಡಾರಿಯವರ ಪತ್ನಿ ಭಾರತಿ(65) ರವರು ಅನಾರೋಗ್ಯದಿಂದಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಆ.22 ರಂದು ನಿಧನರಾದರು.
ಮೃತರು ಪತಿ, ನಾಲ್ಕು ಗಂಡು ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಭಾರತಿಯವರು ಕೊಡುಗೈ ದಾನಿಯಾಗಿದ್ದು, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಉತ್ಸವ ಸಮಿತಿಯ ಉಪಾಧ್ಯಕ್ಷರಾಗಿದ್ದರು.
ಮೃತರ ಅಂತ್ಯಕ್ರಿಯೆಯು ತಾರೀಕು 23 ರ ಸೋಮವಾರ ಬೆಳಿಗ್ಗೆ ಮಂಜೇಶ್ವರದ ಬೆಜ್ಜದಲ್ಲಿ ನಡೆಯಲಿದೆಯೆಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.