ಉಪ್ಪಿನಂಗಡಿ: ಹಳೆಗೇಟು ಬಳಿಯ ಮೀನಿನ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣವೂ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದ್ದೂ, ಆರೋಪಿಗಳ ಬಂಧನಕ್ಕೆ ಸಂಘಟನೆಗಳು ಆಗ್ರಹಿಸುತ್ತಿದೆ. ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು ಸೇರಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ ಸ್ಥಳದಲ್ಲಿಯೇ ಮತ್ತೆ ಮೀನಿನ ಅಂಗಡಿಯನ್ನು ಸಿದ್ದಗೊಳಿಸಿದ್ದಾರೆ.
ಅಂಗಡಿಗೆ ಬೆಂಕಿ ಬಿದ್ದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹಿಂದೂ ಜಾಗರಣ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ಅಂಗಡಿ ಮಾಲಕರಿಗೆ ಆತ್ಮಸ್ಥರ್ಯ ತುಂಬಿದ್ದು ಮಾತ್ರವಲ್ಲದೇ, ಸಂಜೆಯೊಳಗೆ ಅಂಗಡಿ ಮತ್ತೆ ನಿರ್ಮಾಣವಾಗಬೇಕು ಎಂಬ ಪಣತೊಟ್ಟು ಹನಿ ಹನಿ ಸೇರಿ ಹಳ್ಳವೆಂಬಂತೆ ಪ್ರತಿಯೊಬ್ಬರೂ ಹಣ ಸಹಾಯ ನೀಡಿದ್ದು, . ಇದರಿಂದಾಗಿ ಮೊದಲು ಮೇಲ್ಚಾವಣಿಗೆ ಪ್ಲಾಸ್ಟಿಕ್ ಹೊದಿಕೆಯಿದ್ದ ಅಂಗಡಿಯೂ ಈಗ ಸಿಮೆಂಟ್ ಶೀಟ್ ನಿಂದ ಮತ್ತೆ ಅದೇ ಸ್ಥಳದಲ್ಲಿ ಎದ್ದು ನಿಂತಿದೆ. ಈ ಕಾರ್ಯವೂ ಹಿಂದೂ ಕಾರ್ಯಕರ್ತರ ಸಂಘಟನಾತ್ಮಕ ಶಕ್ತಿಯನ್ನು ಎದ್ದು ತೋರಿಸುತ್ತಿದೆ.