ಪುತ್ತೂರು: ಬ್ಲಾಕ್ ಯುವ ಕಾಂಗ್ರೆಸ್ ಘಟಕ, ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕೊರೊನ ಸಂದರ್ಭದಲ್ಲಿ ಕೆಲಸ ಮಾಡಿದ ಕಾಂಗ್ರೆಸ್ ನ ಕೊರೊನಾ ವಾರಿಯರ್ಸ್ ಗಳನ್ನು ಗೌರವಿಸಿ ಮಾತನಾಡಿದ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರು ಯುವ ಕಾಂಗ್ರೆಸ್ ನ ಹುಡುಗರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಜಾತ್ಯಾತೀತ ಮಾನೋಭಾವನೆ ಇಟ್ಟುಕೊಂಡು ಸಮಾಜದ ಕೆಲಸ ಮಾಡಬೇಕೆಂದು ಕರೆ ನೀಡಿ ಮಾತನಾಡಿದ ಅವರು ದೇಶ ಕಟ್ಟುವ ಮಹತ್ತರ ಜವಾಬ್ದಾರಿ ಯುವಕರ ಮೇಲಿದೆ, ಸಾಮಾಜಿಕ ಪಿಡುಗುಗಳ ಬಗ್ಗೆ ಹಾಗೂ ಕೋಮು ವಿದ್ವೇಷವನ್ನು ಹರಡಿ ಶಾಂತಿ ಸಾಮರಸ್ಯವನ್ನು ಹಾಳು ಮಾಡುತ್ತಿರುವ ಕೆಲವು ಶಕ್ತಿಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಯುವ ಸಮುದಾಯದಿಂದ ಆಗ ಬೇಕಾಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಮಾತನಾಡಿ, ಕೇಂದ್ರದ ಮೋದಿ ಸರಕಾರ ಯುವ ಜನಾಂಗಕ್ಕೆ ಅನ್ಯಾಯ ಮಾಡುತ್ತಿದೆ, ಇವತ್ತು ವಿದ್ಯಾಬ್ಯಾಸ ಮುಗಿಸಿ ಹೊರಗೆ ಬಂದ ಯುವಕರು ಉದ್ಯೋಗ ವಿಲ್ಲದೆ ಪರದಾಡುತ್ತಿದ್ದಾರೆ, ಅಗತ್ಯ ವಸ್ತುಗಳ ಬೆಲೆ ವಿಪರೀತವಾಗಿ ಏರಿದೆ, ಕೊರೋನ ಸಂದರ್ಭದಲ್ಲಿ ಶಾಸಕರು ಹಾಗೂ ಸರಕಾರ ಮಾಡುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷ ಜನರಿಗೆ ಸಹಾಯ ಮಾಡಿದೆ, ಕೊರೋನ ಸಂದರ್ಭದಲ್ಲಿ ಜನಪರ ಕೆಲಸ ಮಾಡಿದ ಕಾರ್ಯಕರ್ತರನ್ನು ಗೌರವಿಸೋದು ನಮ್ಮ ಆದ್ಯ ಕರ್ತವ್ಯ ವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ನಾರಾಯಣ ಗುರುಗಳ ತತ್ವ ಸಿದ್ಧಾಂತ ಹಾಗೂ ದೇಶದ ಸಂವಿಧಾನದ ಆಶಯ ಒಂದೇ ಆಗಿರುತ್ತದೆ, ಇಂದು ದೇಶದ ಯುವಕರಿಗೆ ಸರಿಯಾದ ಉದ್ಯೋಗವಿಲ್ಲ, ಪ್ಯಾಸಿಸ್ಟ್ ಶಕ್ತಿಗಳು ಇಂದು ದೇಶವನ್ನು ಹಾಳು ಮಾಡುತ್ತಿದೆ, ಕೋಮುವಾದದಿಂದ ಇವತ್ತು ಯುವ ಜನತೆ ದಾರಿ ತಪ್ಪುತ್ತಿದೆ, ಯುವಕರಲ್ಲಿ ಜಾತ್ಯತೀತ ನಿಲುವು ಅತೀ ಅಗತ್ಯ ವಾಗಿದೆ, ದೇಶದ ಸರ್ವಧಿಕಾರಿ ಆಡಳಿತ ಬಂಡವಾಳ ಶಾಹಿ ಗಳ ಕಪಿ ಮುಷ್ಟಿಯಲ್ಲಿದೆ, ಇದರ ಕುರಿತು ಜನಜಾಗೃತಿ ಮಾಡುವ ಕೆಲಸ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಆಗ ಬೇಕಾಗಿದೆ ಎಂದರು.ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಾರಾಯಣ ಗುರುಗಳ ಬಗ್ಗೆ ಜಿಲ್ಲಾದ್ಯoತ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಪರಮೇಶ್ವರ ಭಂಡಾರಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ, ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೆರಾ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಯಾಕೂಬು ಹಾಜಿ ದರ್ಬೆ, ಮಾಜಿ ನಗರ ಕಾಂಗ್ರೆಸ್ ಅಧ್ಯಕ್ಷರುಗಳಾದ ಲ್ಯಾನ್ಸಿ ಮಸ್ಕೇರೇನಸ್, ಸೂತ್ರಬೆಟ್ಟು ಜಗನ್ನಾಥ ರೈ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗದ ಪ್ರದಾನ ಕಾರ್ಯದರ್ಶಿ ನಾರಾಯಣ ನಾಯಕ್, ನಗರ ಸಭಾ ಸದಸ್ಯ ರೋಬಿನ್ ತಾವ್ರೋ, ಮಾಜಿ ಸದಸ್ಯ ಅನ್ವರ್ ಕಾಸಿಂ, ಬ್ಲಾಕ್ ಕಾರ್ಯದರ್ಶಿ ಗಳಾದ ಮನ ಮೋಹನ್ ರೈ, ಸಿರಿಲ್ ರೋಡ್ರಿಗಸ್, ರೋಷನ್ ರೈ ಬನ್ನೂರು, ರಾಜ್ಯ NSUI ನ ಸಂಯೋಜಕರಾದ ಜೈನುದ್ದಿನ್ ಅತೂರು ,NSUI ನ ಪುತ್ತೂರು ಉಸ್ತುವಾರಿ ಬಾತೀಶ ಅಳಕೆಮಜಲು ಜಿಲ್ಲಾ NSUI ನ ಕಾರ್ಯದರ್ಶಿ ಲಸ್ಟರ್ ಪಿಂಟೋ, ಸೇವಾದಳದ ಜಿಲ್ಲಾ ಪ್ರತಿನಿಧಿ ಸಿದ್ದಿಕ್ ಸುಲ್ತಾನ್ ಕೂಡು ರಸ್ತೆ, ಕಾರ್ಮಿಕ ಘಟಕದ ಜಿಲ್ಲಾ ಪದಾಧಿಕಾರಿ ಅಬೂಬಕ್ಕರ್ ಮುಲಾರ್, ಅರ್ಯಾಪು ಪಂಚಾಯತ್ ಸದಸ್ಯ ನೇಮಾಕ್ಷ ಸುವರ್ಣ,ರಶೀದ್ ಮುರ ಮೊದಲಾದವರು ಉಪಸ್ಥಿತರಿದ್ದರು.
ಬ್ಲಾಕ್ ಯುವಕ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ ಸ್ವಾಗತಿಸಿದರು, ಮುಂಡೂರು ಪಂಚಾಯತ್ ಸದಸ್ಯರಾದ ಕಮಲೇಶ್ ಎಸ್ ಡಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಯುವ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.