ಬಂಟ್ವಾಳ: ಅನ್ಯಕೋಮಿನ ಯುವಕರ ಜೊತೆ ತಿರುಗಾಡುತ್ತಿದ್ದ ಹಿಂದೂ ಯುವತಿಯರನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕಾರಿಂಜದಲ್ಲಿ ಆ.26 ರಂದು ನಡೆದಿದೆ.
ಕಾರಿಂಜ ದೇವಸ್ಥಾನದ ಬಳಿ ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿಯರು ತಿರುಗಾಡುತ್ತಿರುವುದು ಜನರ ಗಮನಕ್ಕೆ ಬರುತಿದ್ದಂತೆ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರ ಗಮನಕ್ಕೆ ತಂದರು ಕೂಡಲೇ ಕಾರ್ಯ ಪ್ರವೃರತ್ತರಾದ ಕಾರ್ಯಕರ್ತರು ದಾಳಿ ನಡೆಸಿ ಜೋಡಿಗಳನ್ನು ಪೋಲಿಸರರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಪೂಂಜಾಲಕಟ್ಟೆ ಪೋಲೀಸರು ಬಂದು ಜೋಡಿಗಳನ್ನು ವಶಕ್ಕೆ ಪಡೆದಿದ್ದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.