ಪುತ್ತೂರು: ಹಿರಿಯ ಕಾಂಗ್ರೆಸ್ ಮುಖಂಡ ವಿಶ್ವನಾಥ ರೈ ಮೇಗಿನಗುತ್ತು(76.ವ) ಅವರು ಅಲ್ಪಕಾಲದ ಅಸೌಖ್ಯದಿಂದ ಆ.26 ರಂದು ರಾತ್ರಿ ನಿಧನರಾದರು.
ಹದಿನೈದು ವರ್ಷಗಳ ಕಾಲ ಮಂಡೂರು ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರು ಭಕ್ತಕೋಡಿ ಹಾಲು ಸೊಸೈಟಿಯ ಸದಸ್ಯರಾಗಿ ಹಾಗೂ ಇನ್ನಿತರ ಅನೇಕ ಸಂಘ ಸಂಸ್ಥೆಗಳಲ್ಲಿ ಈ ಹಿಂದೆ ತೊಡಗಿಸಿಕೊಂಡಿದ್ದರು. ಪ್ರಗತಿಪರ ಕೃಷಿಕರಾಗಿದ್ದ ವಿಶ್ವನಾಥ ರೈ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ ಗೀತಾ ಪುತ್ರರಾದ ರಾಜೇಶ್ ರೈ, ಸುದೇಶ್ ರೈ, ಪುತ್ರಿ ಸವಿತಾ, ಅಳಿಯ ನಿವೃತ್ತ ಸೈನಿಕ ಪ್ರದೀಪ್ ರೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.