ಉಜಿರೆ: ಎಸ್. ಡಿ.ಎಮ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ತನ್ನ ಮನೆಯಲ್ಲಿ ನೇಣಿಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ.
ಕೋಲಾರದ 24 ವರ್ಷದ ಅನುಶ್ರೀ ಜಿ. ಎಸ್ ಮೃತ ಪಟ್ಟವರೆಂದು ಎಂದು ಗುರುತಿಸಲಾಗಿದ್ದು, ಈಕೆ ಇಂಜಿನಿಯರಿಂಗ್ ನಲ್ಲಿ ಇಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ವ್ಯಾಸಂಗ ಮಾಡುತಿದ್ದಳು.
ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಅನುಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಳೆದ ಬಾರಿಯೂ ಈಕೆ ಫೇಲ್ ಆಗಿದ್ದು, ಅದೇ ತರಗತಿಯಲ್ಲಿ ಉಳಿದಿದ್ದಳು.
ಈ ಬಾರಿ ನಡೆದ ಇಂಜಿನಿಯರಿಂಗ್ ಕೊನೆ ಸೆಮಿಸ್ಟರ್ ಪರೀಕ್ಷೆಯಲ್ಲಿ ಮೂರು ವಿಷಯದಲ್ಲಿ ಫೇಲ್ ಆಗಿದ್ದಳು. ಇದರಿಂದ ಮನನೊಂದ ಅನುಶ್ರೀ ತುಂಬಾ ಬೇಸರದಲ್ಲಿದ್ದಳು ಎನ್ನಲಾಗಿದೆ.
ಅನುಶ್ರಿಯ ತಂದೆ ಗೋಪಿಕೃಷ್ಣ ಎಂಬುವವರು ಉಪನ್ಯಾಸಕರಾಗಿದ್ದು, ಫೈಲ್ ಆದ ಬಳಿಕ ಅನುಶ್ರೀ ಗೆ ಧೈರ್ಯ ತುಂಬಿದ್ದರೂ. ಆದರೂ ಕೂಡ ಆಕೆ ಮೌನಕ್ಕೆ ಶರಣಾಗಿದ್ದಳು.
ಇದೇ ವಿಷಯಕ್ಕೆ ಬೇಸತ್ತು ಇಂತಹ ದುಡುಕಿನ ನಿರ್ಧಾರ ತೆಗೆದುಕೊಂಡು, ತನ್ನ ಕೋಲಾರದ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.