ಪುತ್ತೂರು: ವಿಶೇಷ ಮತ್ತು ವಿಭಿನ್ನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ಪುತ್ತೂರಿನ ಬೊಳುವಾರು ಆಕ್ಸಿಸ್ ಬ್ಯಾಂಕ್ ಬಳಿ ಇರುವ ಗಾನಸಿರಿ ಕಲಾ ಚಾವಡಿಯಲ್ಲಿ ಸೆಪ್ಟೆಂಬರ್ 6 ಸೋಮವಾರ ಸಾಯಂಕಾಲ 5.30 ರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗಾಗಿ ಝುಂಬಾ ಫಿಟ್ ನೆಸ್ ತರಗತಿಗಳು ಆರಂಭಗೊಳ್ಳಲಿದೆ.
ನುರಿತ ಮಹಿಳಾ ತರಬೇತುದಾರರಿಂದ ವಾರದಲ್ಲಿ ಮೂರು ದಿನ ಸಾಯಂಕಾಲ ಐದರ ನಂತರ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಬ್ಯಾಚುಗಳಲ್ಲಿ ತರಗತಿಗಳು ನಡೆಯಲಿದೆ.ತರಗತಿಗಳನ್ನು ಪುತ್ತೂರಿನ ಖ್ಯಾತ ವೈದ್ಯರಾದ ಡಾ.ಗೋಪಿನಾಥ ಪೈ ಯವರು ಉದ್ಘಾಟಿಸಲಿದ್ದಾರೆ.
ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಮತ್ತು ಕಹಳೆ ನ್ಯೂಸ್ ಸಂಪಾದಕರಾದ ಶ್ಯಾಮ್ ಸುದರ್ಶನ್ ಭಟ್ ಹೊಸಮೂಲೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದೈಹಿಕ ದೃಢತೆ ಯೊಂದಿಗೆ ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸಲು ಮತ್ತು ವಿಶೇಷವಾಗಿ ಅತಿಯಾದ ಬೊಜ್ಜನ್ನು ನಿವಾರಿಸಿ ತೂಕವನ್ನು ನಿಯಂತ್ರಿಸಿಕೊಳ್ಳಲು ಶೇಕಡಾ ನೂರರಷ್ಟು ಪರಿಣಾಮಕಾರಿ ಈ Zumba fitness ತರಗತಿಗಳು.
ತರಗತಿಗಳಿಗೆ ಸೇರಲು ಇಚ್ಛಿಸುವವರು 9901555893 ಸಂಪರ್ಕಿಸಬಹುದು.