ಪುತ್ತೂರು: ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ 33/11 ಕೆವಿ ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕ್ಯಾಂಪ್ಕೋ ಫ್ಯಾಕ್ಟರಿ, ಕೆಮ್ಮಿಂಜೆ ಮತ್ತು ಮುಕ್ರಂಪಾಡಿ ಫೀಡರ್ ನಲ್ಲಿ ಎ.30 ರಂದು ಪೂರ್ವಾಹ್ನ ಗಂಟೆ 9.30 ರಿಂದ ಅಪರಾಹ್ನ 5ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಆದುದರಿಂದ 33/11 ಕೆವಿ ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಕ್ಯಾಂಪ್ಕೋ ಫ್ಯಾಕ್ಟರಿ, ಕೆಮ್ಮಿಂಜೆ, ದರ್ಬೆ, ಮುಕ್ರಂಪಾಡಿ, ಕೂರ್ನಡ್ಕ ಮತ್ತು ಸಂಪ್ಯ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.


























