ಪುತ್ತೂರು: ಕಾರಿಗೆ ನಕಲಿ ನಂಬರ್ ಹಾಕಿ ಕಾರು ಚಲಾಯಿಸಿದ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ಸಂಜಯನಗರ ಬಳಿ ಮಾರುತಿ ಸ್ವಿಫ್ಟ್ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಕಾರಿನ ಚಾಲಕ ಹಬೀಬ್ ಕಾರು ಬಿಟ್ಟು ಪರಾರಿಯಾಗಿದ್ದರು.
ಅನುಮಾನಗೊಂಡ ಪೊಲೀಸರು ಕಾರಿನ ನಂಬರ್ ಪ್ಲೇಟ್ ಪರಿಶೀಲಿಸಿದಾಗ(ಕೆಎ05 ಎಂಎಸ್ 3335) ಆಗಿದ್ದು, ಇಂಜಿನ್ ನಂಬ್ರ ಮತ್ತು ಚೇಸೀಸ್ ನಂಬರ್ ಪರಿಶೀಲಿಸಿದಾಗ ಇಂಜಿನ್ ನಂಬರ್ (ಡಿ13ಎ0452068), ಚೇಸೀಸ್ ನಂಬರ್ (ಎಮ್.ಎ 3ಎಫ್‌ಹೆಚ್‌ಇಬಿ1 ಎಸ್00562424) ಆಗಿದ್ದು ಕಾರಿನ ನೋಂದಣಿ ನಂಬರಿಗೂ ಹಾಗು ಇಂಜಿನ್ ನಂಬರಿಗೂ, ಚೇಸೀಸ್ ನಂಬರಿಗೂ ವ್ಯತ್ಯಾಸ ಕಂಡು ಬಂದಿರುವುದು ಬೆಳಕಿಗೆ ಬಂದಿದೆ.
ಆರೋಪಿ ಹಬೀಬ್ ಮೋಸ ಮಾಡುವ ಉದ್ದೇಶದಿಂದ ನಕಲಿ ನಂಬರ್ ಅಳವಡಿಸಿ ಕಾರು ಚಲಾಯಿಸಿದ್ದಾರೆ. ಈ ಕುರಿತು ಅವರ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























