ಸುಬ್ರಹ್ಮಣ್ಯ: ಎರಡು ವರ್ಷದ ಮಗು ಅಸೌಖ್ಯದಿಂದ ಮೃತಪಟ್ಟ ಘಟನೆ ಅ.29ರಂದು ವರದಿಯಾಗಿದೆ.
ಸುಬ್ರಹ್ಮಣ್ಯದ ಅನಿಲ್ ಮೊಂತೆರೊ ಮತ್ತು ಸವಿತಾ ದಂಪತಿಯ ಪುತ್ರ ಆಸ್ಟಿನ್ ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅ.28ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಚೇತರಿಕೆ ಕಂಡಿದ್ದರಿಂದ ಮಗುವನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು.
ಅ.29ರಂದು ಮುಂಜಾನೆ ಎಂದಿನಂತೆ ಎದ್ದು ಕೆಲಕಾಲ ಆಟವಾಡುತ್ತಿದ್ದ ಮಗು, ಸ್ವಲ್ಪ ಹೊತ್ತಿನಲ್ಲೇ ಏಕಾಏಕಿ ಮೃತಪಟ್ಟಿದೆ ಎನ್ನಲಾಗಿದೆ.
ಮೃತ ಆಸ್ಟಿನ್ ಸುಬ್ರಹ್ಮಣ್ಯದ ಕೋಳಿ ಫಾರಂ ಉದ್ಯಮಿ ಅನಿಲ್ ಮೊಂತೆರೊ ಅವರ ಪುತ್ರ. ಇಬ್ಬರು ಅಣ್ಣಂದಿರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾನೆ. ಮಗುವಿನ ಅಕಾಲಿಕ ನಿಧನದಿಂದ ಕುಟುಂಬದಲ್ಲಿ ಶೋಕ ಆವರಿಸಿದೆ.


























