ಪುತ್ತೂರು: ನಳ್ಳಿ ನೀರು ಸರಬರಾಜಿನ ವಿಚಾರದಲ್ಲಿ ಹಲ್ಲೆ ನಡೆದ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಂತಿಗೋಡು ಗ್ರಾಮದ ಉಮೇಶ್ ಕಂಡಿಗ ಅವರು ದೂರುದಾರರು. ಅವರಿಗೆ ನರಿಮೊಗರು ಪಂಚಾಯತ್‌ನಿಂದ ನಳ್ಳಿ ನೀರಿನ ಸೌಲಭ್ಯವಿದ್ದು, ಮನೆಗೆ ನೀರು ಸರಬರಾಜು ಆಗದಿದ್ದರಿಂದ ಪಂಚಾಯತ್‌ನಿಂದ ನೀರು ಬಿಡುವ ಕೆಲಸದವರಾದ ಶೇಖರ ಎಂಬವರಿಗೆ ಕರೆ ಮಾಡಿ ನೀರು ಬಿಡುವಂತೆ ತಿಳಿಸಿದ್ದರು.
ಎ.26 ರಂದು ಉಮೇಶ್ ಅವರು ಮನೆಯಲ್ಲಿದ್ದ ವೇಳೆ ಆರೋಪಿತರಾದ ಶೇಖರ ಮತ್ತು ಅವರ ಮಗ ತಿಲಕ್ ಮತ್ತು ಇನ್ನೋರ್ವ ವ್ಯಕ್ತಿ ಮನೆಯ ಬಳಿ ಬಂದು ಉಮೇಶ್ ಅವರೊಂದಿಗೆ ನಳ್ಳಿ ನೀರಿನ ವಿಚಾರದಲ್ಲಿ ಮಾತು ಬೆಳೆಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ಘಟನೆಯನ್ನು ನೋಡಿದ ಉಮೇಶ್ ಅವರ ಪತ್ನಿ ಮತ್ತು ಮಗಳು ಬಂದು ನೋಡಿ ಜಗಳವನ್ನು ಬಿಡಿಸಲು ಬಂದಾಗ ಆರೋಪಿಗಳು ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಹಲ್ಲೆಗೊಂಡ ಉಮೇಶ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























