ಪುತ್ತೂರು: ಮನೆಯ ಸಿಟೌಟ್‌ನಲ್ಲಿ ಕುಳಿತಿದ್ದ ವ್ಯಕ್ತಿಗೆ ನಾಲ್ವರು ಸೇರಿ ಹಲ್ಲೆ ನಡೆಸಿದ ಘಟನೆ ಪಡುವನ್ನೂರು ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಪಡುವನ್ನೂರು ಗ್ರಾಮದ ಮಹಮ್ಮದ್ (56ವ.) ದೂರುದಾರರಾಗಿದ್ದು, ಮನೆಯ ಸಿಟೌಟ್‌ನಲ್ಲಿ ಕುಳಿತ್ತಿದ್ದ ವೇಳೆ ಅಲ್ಲಿಗೆ ಬಂದ ಅಬ್ದುಲ್ ರಹಮಾನ್, ಸಾಹುಲ್ ಹಮೀದ್, ಮಿಕ್ತಾದ್, ರಶೀದ್ ಹಾಗೂ ಮೊಯಿದು ಎಂಬವರು ಅವಾಚ್ಯ ಶಬ್ದಗಳಿಂದ ಬೈದು, ನಮ್ಮ 40 ಸಾವಿರ ರೂಪಾಯಿ ತಿಂದಿದ್ದೀಯಾ ಎಂದು ಹೇಳುತ್ತಾ, ಇದು ನನ್ನ ಜಾಗ, ನೀನು ಯಾಕೆ ಕಾಂಪೌಂಡ್ ಕಟ್ಟುತ್ತೀಯ ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಪತ್ನಿ ಸಫೀಯಾ ಅವರು ಬರುವುದನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ.
ಆರೋಪಿಗಳು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಮಹಮ್ಮದ್‌ರವರು ದೂರು ನೀಡಿದ್ದಾರೆ. ಗಾಯಾಳು ಮಹಮ್ಮದ್ ಅವರು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























