ಕಡಬ: ಇಲ್ಲಿನ ನೂಜಿಬಾಳ್ತಿಲ ಪ್ರದೇಶದಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 1ರಂದು ಬೆಳಕಿಗೆ ಬಂದಿದೆ.
ಈ ಕುರಿತು ಮೃತರ ಪುತ್ರ ರವಿಚಂದ್ರ ಬಿ (37), ಕಡಬ ಕೊಣಾಜೆ ನಿವಾಸಿ, ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಅವರ ತಂದೆ ಚೆನ್ನಪ್ಪ ಪೂಜಾರಿ ಅವರು ಕಡಬದ ನೂಜಿಬಾಳ್ತಿಲದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮಧ್ಯಪಾನ ಮಾಡುವ ಅಭ್ಯಾಸ ಹೊಂದಿದ್ದರು ಎನ್ನಲಾಗಿದೆ.
ಮೇ 1ರಂದು, ಅವರು ವಾಸವಿದ್ದ ಕಟ್ಟಡದ ಮಾಲಿಕರು ರವಿಚಂದ್ರರಿಗೆ ಕರೆ ಮಾಡಿ, ಅವರ ತಂದೆ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ. 17/2026, ಕಲಂ 194 BNSS-2023ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.



























