ಪುತ್ತೂರು, ಜು. 31: ಪುತ್ತೂರು ತಾಲೂಕಿನ ನರಿಮೊಗ್ರು ನಿವಾಸಿಗಳಾದ ಜಗದೀಶ ಹಾಗೂ ಮೂಲತಃ ಉಕ್ಕಿನಡ್ಕದ ವಿನುತಾ ದಂಪತಿಯ 49 ದಿನಗಳ ಹಸುಗೂಸು ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸುಮಾರು ₹10 ಲಕ್ಷ ವೆಚ್ಚವಾಗಲಿದ್ದು, ಕುಟುಂಬವು ಸಾರ್ವಜನಿಕರಲ್ಲಿ ನೆರವಿನ ಮನವಿ ಮಾಡಿದೆ.
ಜನಿಸಿದ ಕೆಲವೇ ದಿನಗಳಲ್ಲಿ ಮಗುವಿನ ಆರೋಗ್ಯದಲ್ಲಿ ತೀವ್ರ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲಿಗೆ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಮಗುವನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈದ್ಯರ ಪರೀಕ್ಷೆಯಲ್ಲಿ ಮಗುವಿಗೆ ಜನ್ಮಜಾತ ಚಯಾಪಚಯ ದೋಷ (Inborn Error of Metabolism – Hyperammonemia with Severe Metabolic Acidosis) ಹಾಗೂ ಬಲಭಾಗದ ಡಯಾಫ್ರಮ್‌ನ ಈವೆಂಟ್ರೇಷನ್ (Right-sided Eventration of Diaphragm) ಎಂಬ ಗಂಭೀರ ಕಾಯಿಲೆಗಳು ಇರುವುದು ದೃಢಪಟ್ಟಿದೆ.
ವೈದ್ಯರ ಸಲಹೆಯಂತೆ ತುರ್ತು ಶಸ್ತ್ರಚಿಕಿತ್ಸೆ ಹಾಗೂ ಮುಂದಿನ ಚಿಕಿತ್ಸೆಗೆ ಸುಮಾರು ₹10 ಲಕ್ಷ ವೆಚ್ಚವಾಗಲಿದೆ. ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಕ್ಕೆ ಈ ವೆಚ್ಚವನ್ನು ಭರಿಸುವುದು ಕಷ್ಟಕರವಾಗಿದ್ದು, ಮಗುವಿನ ಚಿಕಿತ್ಸೆಗೆ ದಾನಿಗಳು ಹಾಗೂ ಸಹೃದಯರು ತಮ್ಮ ಕೈಲಾದ ಆರ್ಥಿಕ ನೆರವು ನೀಡುವಂತೆ ಕುಟುಂಬ ಮನವಿ ಮಾಡಿದೆ.
ನೆರವಿನ ಜೊತೆಗೆ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿನ ಜನರಿಗೆ ತಲುಪಿಸುವ ಮೂಲಕವೂ ಸಹಕಾರ ನೀಡುವಂತೆ ಕೋರಲಾಗಿದೆ.
ಧನ ಸಹಾಯ ನೀಡುವವರು ಈ ಕೆಳಗಿನ ನಂಬರ್ ಅಥವಾ QR CODE ಮೂಲಕ ಕಳುಹಿಸಬಹುದು.
ಕೆನರಾ ಬ್ಯಾಂಕ್
ಶಾಖೆ : ಪುತ್ತೂರು
ಹೆಸರು: ಜಗದೀಶ ವೈ.
Mob No: 96325 84267
IFSC: CNRB0010134
A/c: 110323648519



























