ಕೆಮ್ಮಾರ: ಕೆಲ ದಿನಗಳ ಹಿಂದೆ ಕೆಮ್ಮಾರ ಮಸೀದಿ ಬಳಿಯ ಹೊಳೆಯಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮರಣ ಹೊಂದಿದ ಶಫೀಕ್ ಮನೆಗೆ ಕಾಂಗ್ರೆಸ್ ನಿಯೋಗ ಹಾಗೂ ಯೂತ್ ಕಾಂಗ್ರೆಸ್ ಅಧ್ಯಕ್ಷರು ಭೇಟಿ ನೀಡಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ, ದ.ಕ. ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್, ಕಾಂಗ್ರೆಸ್ ಮುಖಂಡರಾದ ನಝೀರ್ ಮಠ, ಉಮ್ಮರ್ ಕೆಮ್ಮಾರ, ಶೌಕತ್ ಅಲಿ ಜೇಡರಪೇಟೆ, ಸಿದ್ದಿಕ್ ಅಡೆಕ್ಕಲ್, ಉಮ್ಮರ್ ಕೆಮ್ಮಾರ, ನವಾಲ್ ಉಪಸ್ಥಿತರಿದ್ದರು.

