ಉಪ್ಪಿನಂಗಡಿ: ಇಲ್ಲಿನ ನೆಕ್ಕಿಲಾಡಿಯ ಕೊಡಿಪ್ಪಾಡಿ ನಿವಾಸಿ, ದಿ| ಆದಂಕುಂಞಯವರ ಪುತ್ರ ಇಸ್ಮಾಯಿಲ್ (49 ವ) ಸೌದಿ ಅರೇಬಿಯಾದ ರಿಯಾದ್ ನಲ್ಲಿ ಸೆ.6 ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು.

ಇಸ್ಮಾಯಿಲ್ ಕಳೆದ 27 ವರ್ಷಗಳಿಂದ ರಿಯಾದ್ ನಲ್ಲಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. 10 ತಿಂಗಳ ಹಿಂದೆ ಊರಿಗೆ ಬಂದು ಹೋಗಿದ್ದರು.
ಮೃತರು ಪತ್ನಿ ಸ್ಪೈ ನಾಝ್, ಪುತ್ರ ಮಹಮ್ಮದ್ ಅಜೀಂ, ಪುತ್ರಿ ಹೈಫ್ ರನ್ನು ಅಗಲಿದ್ದಾರೆ.