ಪುತ್ತೂರು: ವ್ಯಕ್ತಿಯೊಬ್ಬರನ್ನು ಫೇಸ್ ಬುಕ್ ಮೂಲಕ ಪರಿಚಯಿಸಿಕೊಂಡು ವ್ಯಾಪಾರದಲ್ಲಿ ಪಾಲುದಾರರಾಗಿ ಮಾಡಿಕೊಳ್ಳುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ವಂಚನೆಗೊಳಗಾದವರನ್ನು ನಿಡ್ಪಳ್ಳಿ ಗ್ರಾಮದ ಮುಂಡೂರು ನಿವಾಸಿ ಗೋಪಾಲಕೃಷ್ಣ ಭಟ್ ಎಂದು ಗುರುತಿಸಲಾಗಿದೆ.
ಗೋಪಾಲಕೃಷ್ಣ ಭಟ್ ರವರಿಗೆ ಮಾ.25 ರಂದು ಫೇಸ್ ಬುಕ್ ನಲ್ಲಿ ನತಲಿ ಜೇರನ್ ಎಂಬ ಖಾತೆಯಿಂದ ಫ್ರೆಂಡ್ಸ್ ರಿಕ್ವೆಸ್ಟ್ ಬಂದಿದ್ದು, ಅವರ ಫ್ರೆಂಡ್ಸ್ ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿರುತ್ತಾರೆ.
ನಂತರದ ದಿನಗಳಲ್ಲಿ ಜಿ-ಮೇಲ್ ಖಾತೆಯ ವಿವರವನ್ನು ಕೂಡ ಪಡೆದುಕೊಂಡು , ಅದರಲ್ಲಿ ಕೂಡ ಸಂದೇಶ ಕಳುಹಿಸುತ್ತಿದ್ದರು. ಗೋಪಾಲಕೃಷ್ಣ ಭಟ್ ರವರಿಗೆ ಜಿ-ಮೇಲ್ ನಲ್ಲಿ ನತಲಿ ಜೇರನ್ ಮತ್ತು ಮಾರ್ಕ್ ಡೇವಿಡ್ ಎಂಬುದಾಗಿ ಇಬ್ಬರು ಪರಿಚಯಿಸಿಕೊಂಡಿದ್ದು, ವ್ಯಾಪಾರದಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುತ್ತೇವೆ ಎಂದು ಸುಳ್ಳು ಹೇಳಿ ಅವರಿಂದ ಸುಮಾರು 24,92,430 ರೂ. ಯನ್ನು ಆರೋಪಿಗಳ ಖಾತೆಗೆ ವರ್ಗಾಯಿಸಿಕೊಂಡು ಅದನ್ನು ಮರಳಿ ನೀಡದೆ ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅಕ್ರ 81/2021 ಕಲಂ: 417,419,420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.