ಬೆಳ್ತಂಗಡಿ: ರಾತ್ರಿ ವೇಳೆ ಮನೆಯ ಹಿಂಭಾಗದಿಂದ ಏಣಿ ಮೂಲಕ ಮನೆಯ ಹಂಚನ್ನು ತೆಗೆದು ಮನೆಯ ಒಳಗೆ ಪ್ರವೇಶಿಸಿ ಬೀರುವಿನಲ್ಲಿದ್ದ ಒಡವೆ ಮತ್ತು ಸಾವಿರಾರು ರೂ. ಹಣ, ತೀಶೋಟ್ ಕಂಪೆನಿಯ ವಾಚ್ ಅನ್ನು ಕಳ್ಳಗೈದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಕಾರ್ಯಾಪಾಡಿಯಲ್ಲಿ ಸೆ.9 ರಂದು ನಡೆದಿದೆ.
ಇಳಂತಿಲ ಗ್ರಾಮದ ಕಾರ್ಯಾಪಾಡಿ ನಿವಾಸಿ ಮಹಮ್ಮದ್ ಹನೀಫ್ ರವರ ಮನೆಯಲ್ಲಿ ಕಳ್ಳತನ ನಡೆದಿದ್ದು, ರಾತ್ರಿ ವೇಳೆ ಮನೆಯ ಹಿಂಭಾಗದಿಂದ ಏಣಿ ಮೂಲಕ ಮನೆಯ ಅಂಚನ್ನು ತೆಗೆದು ಮನೆಯ ಒಳಗೆ ಪ್ರವೇಶಿಸಿ ಬೀರುವಿನಲ್ಲಿದ್ದ ಸುಮಾರು 30,000 ರೂ. ಕಿವಿಯೋಲೆ, 5,000 ರೂ.ಯ ತಿಶೋಟ್ ಕಂಪೆನಿಯ ವಾಚ್ ಮತ್ತು 5,000 ರೂ. ನಗದನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಕುರಿತಾಗಿ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ 86/2021 ಕಲಂ 457,380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.