ಪುತ್ತೂರು: ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿಯ ‘ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್’ ಸೆ.15 ರಂದು ಪುತ್ತೂರಿನ ಎ.ಪಿ.ಎಂ.ಸಿ ರಸ್ತೆಯಲ್ಲಿರುವ ಕ್ರಿಸ್ಟೋಫರ್ ಬಿಲ್ಡಿಂಗ್ ನಲ್ಲಿ ಶುಭಾರಂಭಗೊಳ್ಳಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಸಹಾಯಕ ಆಯುಕ್ತರಾದ ಯತೀಶ್ ಉಳ್ಳಾಲ್ ರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂತ ಫಿಲೋಮಿನಾ ಕಾಲೇಜಿನ ಡಾ. ಅಂತೋನಿ ಪ್ರಕಾಶ್ ಮೊಂತೇರೊ, ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಕರಾದ ಇಲಿಯಾಸ್ ಪಿಂಟೋ, ಮಿಸ್ಟರ್ ಕರ್ನಾಟಕ ರವಿ ಕುಲಾಯಿ, ತುಸ್ಕರ್ ಪೂಲ್ಸ್ ಮತ್ತು ಫಿಟ್ನೆಸ್ ನ ಮಾಲಕರಾದಂತಹ ನವೀನ್ ಕುಲಾಲ್ ಆಗಮಿಸಲಿದ್ದಾರೆ.

ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಫಿಟ್ನೆಸ್ ಸೆಂಟರ್ ನಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಬೇರೆ ಬೇರೆ ಜಿಮ್ ಗಳಿದ್ದು, ಪುತ್ತೂರಿನಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಸ್ಪೆಷಾಲಿಟಿ ಮಾಡಲಾಗಿದೆ. ಹಾಗೆಯೇ ಮಹಿಳೆಯರಿಗೆ ಮಹಿಳಾ ಟ್ರೈನರ್ ಟ್ರೈನ್ ಮಾಡಲಿದ್ದಾರೆ. ಎಲ್ಲಾ ತರಹದ ಫಿಟ್ನೆಸ್ ಟ್ರೈನಿಂಗ್ ಅನ್ನು ಇಲ್ಲಿ ನೀಡಲಾಗುವುದು ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9535627247 ಸಂಪರ್ಕಿಸಬಹುದಾಗಿದೆ.