ಪುತ್ತೂರು: ಬಿಲ್ಲವ ಗ್ರಾಮ ಸಮಿತಿ ಕೋಡಿಂಬಾಡಿ ವತಿಯಿಂದ 2020 ಮತ್ತು 21ನೇ ಸಾಲಿನ ಎಸ್.ಎಸ್. ಎಲ್. ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 75% ಅಂಕ ಮೇಲ್ಪಟ್ಟ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಮಹಿಳಾ ಸಮ್ಮಿಲನ ಕಾರ್ಯಕ್ರಮವು ಸೆ.19 ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಪ್ರಕಾಶ್ ಬದಿನಾರು ವಹಿಸಿದ್ದರು. ಉದ್ಘಾಟನೆಯನ್ನು ನಾಗೇಶ್ ಬಲ್ನಾಡು ನೆರವೇರಿಸಿದರು.

2020-21ನೇ ಸಾಲಿನ ಎಸ್.ಎಸ್. ಎಲ್. ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 75% ಅಂಕ ಮೇಲ್ಪಟ್ಟು ಅಂಕಗಳಿಸಿದ ರಕ್ಷಾ , ಆದಿಶ್ , ಬಿಂದುಶ್ರೀ, ಅಮೋಘ ಜೆ. ಕೆ, ದೃತಿ, ಅಷಿತಾ,ಜೀವಿತ,
ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ನಿಡ್ದೊಳೆ ಅಸಿಸ್ಟೆಂಟ್ ಮ್ಯಾನೇಜರ್ ಹರೀಶ್, ಉಪ್ಪಿನಂಗಡಿ ಯುವವಾಹಿನಿ ಅಧ್ಯಕ್ಷ ಚಂದ್ರಶೇಖರ ಸನಿಲ್, ಪುತ್ತೂರು ಮಹಿಳಾ ಬಿಲ್ಲವ ಸಂಘದ ಅಧ್ಯಕ್ಷೆ ಚಂದ್ರಲೇಖ ಮುಕ್ವೆ, ಕೋಡಿಂಬಾಡಿ ಬಿಲ್ಲವ ಗ್ರಾಮ ಸಮಿತಿ ಗೌರವಧ್ಯಕ್ಷ ಜಯಾನಂದ ಕೆ, ಉಪ್ಪಿನಂಗಡಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶಯನಾ ಜಯಾನಂದ್, ಪುತ್ತೂರು ಮಹಿಳಾ ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ವಿನಯ ವಸಂತ್, ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಚಂದ್ರ ಪೂಜಾರಿ, ಮನೋಹರ್, ಬೆಳ್ಳಿಪ್ಪಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾದ ವಸಂತ ಕುಂಡಪು ಉಪಸ್ಥಿತರಿದ್ದರು. ಜಯಪ್ರಕಾಶ್ ಬದಿನಾರು ಸ್ವಾಗತಿಸಿ, ಉಪಾಧ್ಯಕ್ಷರಾದ ಶ್ರೀಧರ್ ಕೆದಿಕಂಡೆ ವಂದಿಸಿದರು. ಗೌತಮ್ ಕುಕ್ಯಾನ್ ಕಾರ್ಯಕ್ರಮ ನಿರೂಪಿಸಿದರು.






