ಸುಳ್ಯ: ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ರಕ್ತ ಚಂದನದ ಮರಗಳನ್ನು ಕಡಿದು ದಿಮ್ಮಿಗಳನ್ನಾಗಿ ಪರಿವರ್ತಿಸಿ ಶೇಖರಿಸಿದ್ದ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ ಘಟನೆ ಸುಳ್ಯ ತಾಲೂಕಿನ ಬಾಳಿಲದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಸುಳ್ಯ ತಾಲೂಕಿನ ಬಾಳಿಲ ನಿವಾಸಿ ಅಬ್ಬುಲ್ಲಾ(51), ಪುತ್ತೂರು ತಾಲೂಕಿನ ಮಾಡಾವು ನಿವಾಸಿ ಹಮೀದ್ ಕೆ. ಎಂದು ಗುರುತಿಸಲಾಗಿದೆ.
ಮಾರಾಟ ಮಾಡುವ ಉದ್ದೇಶದಿಂದಾಗಿ ಸುಳ್ಯ ಬಾಳಿಲದ ಶೆಡ್ ನಲ್ಲಿ ಆರೋಪಿಗಳು ರಕ್ತ ಚಂದನದ ಮರಗಳನ್ನು ಕಡಿದು ದಿಮ್ಮಿಗಳನ್ನಾಗಿ ಪರಿವರ್ತಿಸಿ ಶೇಖರಿಸಿದ್ದ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ, 260ಕೆ.ಜಿ. ಯ ರಕ್ತ ಚಂದನ ಮರಗಳ 40 ದಿಮ್ಮಿಗಳು ಅಂದಾಜು ಮೌಲ್ಯ 26,00,000 ಲಕ್ಷದ ಸ್ವತ್ತನ್ನು ಹಾಗೂ ಆರೋಪಿಗಳನ್ನು ವಶಪಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಯಚರಣೆಯಲ್ಲಿ ಚಿಕ್ಕಮಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪ ನಿರೀಕ್ಷಕರಾದ ಶೋಭಾ ರವರ ನೇತೃತ್ವದಲ್ಲಿ, ಸಿಬ್ಬಂದಿಗಳಾದ ದೇವರಾಜ, ದಿವಾಕರ, ಕೃಷ್ಣ ರಾಜ್ ಅರಸ್, ದಿನೇಶ, ದಿಲೀಪ, ಹಾಲೇಶ ಹಾಗೂ ಚಾಲಕರಾದ ತಿಮ್ಮ ಶೆಟ್ಟಿ ಪಾಲ್ಗೊಂಡಿದ್ದರು.


























