ಮುಂಡೂರು: ಜನಸಂಘ ಸ್ಥಾಪಕ ಮತ್ತು ಪಕ್ಷದ ಬೆಳವಣಿಗೆ ಕಾರಣಕರ್ತರಾದ ಪಂಡಿತ್ ದೀನ್ದಯಾಳ್ ಉಪಾಧ್ಯಾಯರ ಜನ್ಮದಿನವನ್ನು ಮುಂಡೂರು ಬಿಜೆಪಿ ಪಕ್ಷದಿಂದ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮುಂಡೂರು ಬಿಜೆಪಿ ಪಕ್ಷದಿಂದ ದೀನ್ ದಯಾಳ್ ಜನ್ಮದಿನಾಚರಣೆಯ ಪ್ರಯುಕ್ತ ಅನಾರೋಗ್ಯದಿಂದ ಇರುವ ಹಿರಿಯ ಕಾರ್ಯಕರ್ತರಾದ ಇನಸ್ ಡೀಸೋಜ ಅವರಿಗೆ ವಾಟರ್ ಬೆಡ್ ಮತ್ತು ಮಲಗಲು ಮಂಚವನ್ನು ಒದಗಿಸಲಾಯಿತು. ಗಾಂಗ್ರಿನ್ ಕಾಯಿಲೆಯಿಂದ ತನ್ನ ಕಾಲು ಕಳೆದುಕೊಂಡಿದ್ದ ಡಿಸೋಜಾ ಆತ್ಮ ಸ್ಥೆರ್ಯ ತುಂಬುವ ಕೆಲಸ ಮಾಡಿದರು. ಮುಂದಿನ ದಿನದಲ್ಲೂ ನಾವು ನಿಮ್ಮ ಜೊತೆ ಇದ್ದೇವೆ ಎಂದು ಅವರಿಗೆ ಸಂತೈಸಿದರು.

ಹಿರಿಯ ಕಾರ್ಯಕರ್ತರಾದ ಸೀನ ನಾಯ್ಕ್ ರವರ ಮನೆಗೆ ತೆರಳಿ ಅವರನ್ನು ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಲಾಯಿತು. ಸನ್ಮಾನವನ್ನು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ್ ಮತ್ತು ಕಾರ್ಯದರ್ಶಿ ಜನಾರ್ದನ ಪೂಜಾರಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪ ಸದಸ್ಯರಾದ ಬಾಲಕೃಷ್ಣ ಪೂಜಾರಿ, ಅಶೋಕ್ ಕುಮಾರ್, ಅರುಣಾ ಕಣ್ಣರ್ನೂಜಿ, ಪಕ್ಷದ ಪ್ರಮುಖರಾದ ಬಾಲಚಂದ್ರ ಗೌಡ ಕಡ್ಯ, ಅನಿಲ್ ಕಣ್ಣರ್ನೂಜಿ, ಅರುಣ್ ಪುತ್ತಿಲ, ಪ್ರಸಾದ್. ಧನಂಜಯ. ಸಂತೋಷ್ ಪ್ರಖ್ಯಾತ್. ಸನತ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
