ಮಂಗಳೂರು: ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ, ಮಹಿಳಾ ವೇದಿಕೆ, ಅಶೋಕನಗರ ವತಿಯಿಂದ ಸೆ. 25 ರ ಶನಿವಾರ ರಾತ್ರಿ 10 ಗಂಟೆ ಯಿಂದ ಮಧ್ಯರಾತ್ರಿ 3.15 ರವರೆಗೆ ಮಂಗಳೂರಿನ ಲೇಡಿಹಿಲ್ ನಿಂದ ಹಿಡಿದು ಊರ್ವ ಸ್ಟೋರ್ ಬಸ್ ಸ್ಟಾಂಡ್ ವರೆಗಿನ ಮುಖ್ಯ ರಸ್ತೆಯ ಉಬ್ಬು ( Humps ) ಗಳಿಗೆ ಬಣ್ಣ ಹಾಕುವ ವಿಶಿಷ್ಟ ಸೇವಾ ಕಾರ್ಯಕ್ರಮ ನಡೆಯಿತು.
ಈ ಉತ್ಸಾಹಭರಿತ ಸಾರ್ವಜನಿಕ ಸೇವಾ ಕಾರ್ಯಕ್ರಮದಲ್ಲಿ ಸುಮಾರು 15 ಮಹಿಳಾ ಸದಸ್ಯರು ಉತ್ಸವದಿಂದ ಭಾಗವಹಿಸಿದರು. ಉಬ್ಬುಗಳಿಗೆ ಬಣ್ಣಹಾಕುವ ಕಾರ್ಯದಲ್ಲಿ ತೊಡಗಿ ತಮ್ಮ ಸೇವಾ ಕೈಂಕರ್ಯವನ್ನು ಮೆರೆದರು.
ಬಿರುವೆರ್ ಕುಡ್ಲ ಕೇಂದ್ರೀಯ ಸಮಿತಿ ಸದಸ್ಯರಾದ ಸುನಿಲ್ ಮತ್ತು ಶರಣ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸೂಕ್ತ ನೆರವು ನೀಡಿದರು.ಬಿರುವೆರ್ ಕುಡ್ಲ ಮಹಿಳಾ ವೇದಿಕೆ ಅಶೋಕ ನಗರ ವಲಯದ ಎಲ್ಲ ಮಹಿಳೆಯರು ಯಾವುದೇ ಕೆಲಸಕ್ಕೆ ಹಿಂಜರಿಯದೆ ಪ್ರತಿಯೊಂದು ಕೆಲಸಕ್ಕೂ ತುಂಬ ಉತ್ಸಾಹದಿಂದ ಕೈ ಜೋಡಿಸಿಕೊಂಡು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ ಹಾಗೇ ಯಾವುದೇ ರೀತಿಯ ಆಯಾಸವನ್ನು ಲೆಕ್ಕಿಸದೆ ತುಂಬ ಉತ್ಸಾಹದಿಂದ ಕೆಲಸವನ್ನು ನಿರ್ವಹಿಸಿದ್ದಾರೆ ಎಂದು ಈ ಸೇವಾ ಕೆಲಸವನ್ನು ನೋಡಲು ಬಂದ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ರವರು ಮೆಚ್ಚುಗೆ ವ್ಯಕ್ತಪಡಿಸಿದರು.