ವಿಟ್ಲ: ದ್ವಜ ತೆರವು ವಿಚಾರವಾಗಿ ಠಾಣೆಯಲ್ಲಿ ಹಿಂ.ಜಾ.ವೇ.ಕಾರ್ಯಕರ್ತರು ಜಮಾಯಿಸಿದ ಘಟನೆ ಅ.2 ರಂದು ರಾತ್ರಿ ವೇಳೆ ನಡೆದಿದೆ.
ವೀರಕಂಭ ಬೆಂಇಣ್ತಿಮಾರ್ ಭಂಡಾರದ ಚಾವಡಿ ಮನೆಗೆ ಹೋಗುವ ದ್ವಾರಕ್ಕೆ ಅಳವಡಿಸಲಾದ ಕೇಸರಿ ಧ್ವಜವನ್ನು ತೆರವುಗೊಳಿಸಿದ ಪಂಚಾಯತ್ ಪಿಡಿಓ ರನ್ನು ಸ್ಥಳೀಯ ಹಿಂದೂ ಮುಖಂಡ ದೇವಿ ಪ್ರಸಾದ್ ಶೆಟ್ಟಿ ಯವರು ತರಾಟೆಗೆ ತೆಗೆದುಕೊಂಡಿದ್ದರು ಹಾಗೂ ಅಲ್ಲೇ ದ್ವಜವನ್ನು ಅಳವಡಿಸಿದ್ದರು.ಆದರೆ ಈ ವಿಚಾರ ಮುಂದುವರಿದು ಹಿಂ.ಜಾ.ವೇ.ಕಾರ್ಯಕರ್ತರಿಗೆ ಕಾಂಗ್ರೆಸ್ ಗ್ರಾ.ಪಂ.ಸದಸ್ಯ ಮತ್ತು ಅನ್ಯಮತಿಯ ಬೆದರಿಕೆ ಹಾಕಿದ ಪ್ರಕರಣ ನಡೆದಿದ್ದು, ಪ್ರಕರಣದ ಆರೋಪಿಯ ಬಂಧನ ವಿಳಂಬವಾದ ಕಾರಣ ವಿಟ್ಲ ಠಾಣೆಯ ಮುಂಭಾಗದಲ್ಲಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಮತ್ತು ಪರಿವಾರ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದರು ಎಂದು ತಿಳಿದು ಬಂದಿದೆ.
ಆರೋಪಿಯ ಬಂಧನಕ್ಕೆ ಪಟ್ಟು ಹಿಡಿದಿದ್ದು ಪೋಲೀಸರು ಬೆಳಿಗ್ಗೆ ಬಂಧಿಸುವ ಭರವಸೆ ನೀಡಿದರು ಆದರೆ ಅದಕ್ಕೆ ಒಪ್ಪದ ಕಾರ್ಯಕರ್ತರು ಆರೋಪಿಯನ್ನು ರಾತ್ರಿಯೇ ಬಂಧಿಸಬೇಕು ಇಲ್ಲದಿದ್ದರೆ ಠಾಣೆಯ ಮುಂಭಾಗದಿಂದ ಕದಲುವುದಿಲ್ಲ ಎನ್ನುತಿದ್ದಂತೆ, ವಿಟ್ಲ ಪೋಲಿಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.