ಪುತ್ತೂರು: ತಾಲೂಕಿನ ಬನ್ನೂರು ವ್ಯಾಪ್ತಿಯ ಗುರುಂಪುನಾರ್ ರೆಂಜಾಳ ನಿವಾಸಿ ಹರಿಶ್ಚಂದ್ರ ಆಚಾರ್ಯರ ಮನೆಯ ಮೇಲ್ಚಾವಣಿಯು ಎರಡು ತಿಂಗಳ ಹಿಂದೆ ಮುರಿದು ಬಿದ್ದು ಮಳೆಯ ನೀರು ಮನೆಯೊಳಗೆ ಸೋರುತ್ತಿದ್ದು, ಮನೆಯಲ್ಲಿ ರಾತ್ರಿ ಮಲಗಲು ಸಾದ್ಯವಾಗದೆ ಮನೆಯ ಹೊರಗಡೆ ರಾತ್ರಿ ಮಲಗುತ್ತಿದ್ದಾರೆ. ಇವರು ಅಂಗ ವೈಕಲ್ಯತೆ ಹೊಂದಿದ್ದು ಯಾವ ಕೆಲಸವನ್ನು ಮಾಡಲು ಸಾದ್ಯವಾಗದೆ ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ. ಈ ಶೋಚನೀಯ ಸ್ಥಿತಿಯಲ್ಲಿ ಇರುವ ಇವರ ಮನೆಗೆ ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಯವರು ಖುದ್ದು ಭೇಟಿ ನೀಡಿ ಅವರ ಪರಿಸ್ಥಿತಿಯನ್ನು ನೋಡಿ ಇದ್ದ ಮನೆಯ ಮೇಲ್ಚಾವಣಿಗೆ ಸಿಮೆಂಟ್ ಶೀಟ್ ಹಾಕಿ ರಿಪೇರಿ ಮಾಡಿ ಕೊಡುವ ಭರವಸೆ ನೀಡಿರುತ್ತಾರೆ.
ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಸರಿಯಾದ ಸೂರು ನಿರ್ಮಾಣ ಮಾಡಿಕೊಡುವ ಭರವಸೆಯನ್ನು ನೀಡುವ ಮೂಲಕ ಕಷ್ಟದಲ್ಲಿರುವ ಕುಟುಂಬಕ್ಕೆ ರೈ ಯವರು ನೆರವಿನ ಹಸ್ತವನ್ನು ಚಾಚಿದ್ದಾರೆ.





























