ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಬೆಳೆಯುತ್ತಿರುವ ನಗರವಾಗಿದ್ದು ಇಲ್ಲಿ ಕಳೆದ 5 ವರ್ಷಗಳ ಹಿಂದೆ ಮೆಡಿಕಲ್ ಕಾಲೇಜೊಂದನ್ನು ತೆರೆಯಲು ಸ್ಥಳ ಗುರುತಿಸಿ ಬನ್ನೂರು ಗ್ರಾಮದ ಸ ನಂಬ್ರ 84ರ ಪಹಣಿ ಪತ್ರಿಕೆಯಲ್ಲಿ ದಾಖಲಾತಿಯನ್ನೂ ಮಾಡಲಾಗಿರುತ್ತದೆ. ಆದರೆ ಈ ತನಕ ಮೆಡಿಕಲ್ ಕಾಲೇಜು ತೆರೆಯದೇ ಇರುವುದು ವಿಪರ್ಯಾಸ. ದ. ಕ. ಜಿಲ್ಲೆಯಲ್ಲಿ ಯಾವುದೇ ಸರಕಾರಿ ಮೆಡಿಕಲ್ ಕಾಲೇಜುಗಳಿಲ್ಲ, ಬಡ ಜನರು ಮೆಡಿಕಲ್ ಕಲಿಯಬೇಕಾದರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖಾಸಗಿ ಕಾಲೇಜುಗಳಿಗೆ ಸೇರಬೇಕಾಗಿದೆ. ಈಗಾಗಲೇ ಕಾಲೇಜಿಗೆ ಸ್ಥಳ ನಿಯುಕ್ತಿಯಾಗಿದ್ದರೂ ಸರ್ಕಾರವು ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಸಹಕರಿಸಿದರೆ ಹಲವರಿಗೆ ನೆರವಾದಂತಾಗುತ್ತದೆ. ಪುತ್ತೂರು ಪಟ್ಟಣದಲ್ಲೂ ಹಲವಾರು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿವೆ.. ಇಲ್ಲಿ ಕಾಲೇಜು ಸ್ಥಾಪನೆಯಾದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ತರಬೇತಿಗೆ ಅಡ್ಡಿಯಿಲ್ಲ.. ಹಾಗಾಗಿ ಆದಷ್ಟು ಶೀಘ್ರವಾಗಿ ಮೆಡಿಕಲ್ ಕಾಲೇಜು ತೆರೆಯಬೇಕು ಇಲ್ಲವಾದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ತೀವ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಮಂಗಳೂರಿನ ಕನ್ನಡ ಸೇನೆ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಎ ಅವರು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು, ಜಿಲ್ಲಾಧಿಕಾರಿಯವರು, ಪುತ್ತೂರು ಶಾಸಕರಿಗೆ ಮನವಿ ಸಲ್ಲಿಸಿದರು.