ಕಡಬ : ವಿ.ಹಿಂ.ಪ ಬಜರಂಗದಳ ಕಡಬ ಪ್ರಖಂಡದ ಖಚಿತ ಮಾಹಿತಿಯ ಮೇಲೆ ಅಕ್ರಮ ಕಸಾಯಿಖಾನೆಗೆ ಪೊಲೀಸರು ದಾಳಿ ಮಾಡಿದ ಘಟನೆ ಅ.10 ರಂದು ಉದನೆಯ ಕಲಪ್ಪಾರು ಎಂಬಲ್ಲಿ ನಡೆದಿದೆ.
ಉದನೆಯ ಕಲಪ್ಪಾರಿನ ಮನೆಯೊಂದರಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿದ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ವಿಹಿಂಪ ಬಜರಂಗದಳ ಕಡಬ ಪ್ರಖಂಡ ಪೊಲೀಸರ ಗಮನಕ್ಕೆ ತಂದಿದ್ದು, ಅ.10 ರಂದು ದಾಳಿ ನಡೆಸಿದ ನೆಲ್ಯಾಡಿ ಪೊಲೀಸರು ಸುಮಾರು 50 ಕೆಜಿಯಷ್ಟು ದನದ ಮಾಂಸ ಹಾಗೂ 1 ಕಾರು, 5 ಬೈಕುಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ದಾಳಿ ವೇಳೆ ಕೆಲವರು ಪರಾರಿಯಾಗಿದ್ದು, ಓರ್ವ ಪೊಲೀಸರ ವಶವಾಗಿದ್ದಾನೆ ಎಂದು ತಿಳಿದು ಬಂದಿದೆ.





























