ದೇಶದಲ್ಲಿ ಸತತ 7ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗಿದೆ. ಲೀಟರ್ ಪೆಟ್ರೋಲ್ ಗೆ 29-30 ಪೈಸೆ ಹೆಚ್ಚಾದರೆ, ಡೀಸೆಲ್ ದರದಲ್ಲಿ 35-37 ಪೈಸೆ ಹೆಚ್ಚಳವಾಗಿದೆ.
ಗ್ರಾಹಕರಿಗೆ ತೈಲ ದರ ಏರಿಕೆ ಶಾಕ್ ನೀಡಿದೆ. ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ. ಎಲ್ಲಾ ರಾಜ್ಯಗಳಲ್ಲೂ ಈಗಾಗಲೇ ಪೆಟ್ರೋಲ್ಬೆಲೆ ಶತಕದ ಗಡಿ ದಾಟಿದ್ದು, ಮುಂಬೈನಲ್ಲಿ ಡೀಸೆಲ್ಬೆಲೆ ಸಹ ನೂರರ ಗಡಿ ದಾಟಿದೆ.
ಪ್ರಮುಖ ನಗರಗಳಲ್ಲಿ ಎಷ್ಟಿದೆ ರೇಟ್..?
ದೆಹಲಿ: ಲೀಟರ್ ಪೆಟ್ರೋಲ್ ದರ 104.44ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 93.17 ರೂ. ಆಗಿದೆ.
ಮುಂಬೈ: ಲೀಟರ್ ಪೆಟ್ರೋಲ್ ದರ 110.41ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 101.03 ರೂ. ಆಗಿದೆ.
ಚೆನ್ನೈ: ಲೀಟರ್ ಪೆಟ್ರೋಲ್ ದರ 101.79ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 97.59 ರೂ. ಆಗಿದೆ.
ಕೊಲ್ಕತ್ತಾ: ಲೀಟರ್ ಪೆಟ್ರೋಲ್ ದರ 105.10 ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 96.28 ರೂ.ಆಗಿದೆ.
ಬೆಂಗಳೂರು: ಲೀಟರ್ ಪೆಟ್ರೋಲ್ ದರ 107.77ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 98.89 ರೂ. ಆಗಿದೆ.