ಪುತ್ತೂರು: ಬ್ಲಾಕ್ ಕಾಂಗ್ರೆಸ್ ನೇತ್ರತ್ವದಲ್ಲಿ ಕೆದಂಬಾಡಿ ವಲಯ ಕಾಂಗ್ರೆಸ್ ವತಿಯಿಂದ ಅ.16 ರಂದು ತಿಂಗಳಾಡಿಯಲ್ಲಿ ನಡೆಯಲಿರುವ ‘ಮಹಾತ್ಮಗಾಂಧಿ ಗ್ರಾಮ ಸ್ವರಾಜ್’ ಕಾರ್ಯಕ್ರಮದ ಬಗೆಗಿನ ವಲಯ ಕಾಂಗ್ರೆಸ್ ಪೂರ್ವಬಾವಿ ಸಭೆಯು ಕುಂಬ್ರದ ನಿಶ್ಮಿತಾ ಕಾಂಪ್ಲೆಕ್ಸ್ ನಲ್ಲಿ ವಲಯ ಅಧ್ಯಕ್ಷ ಪುರಂದರ ರೈ ಕೊರಿಕ್ಕರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಬ್ಲಾಕ್ ಉಪಾಧ್ಯಕ್ಷ ಮನೂಹರ ರೈ ಎಂಡೆಸಾಗು ಕಾರ್ಯದರ್ಶಿ ಹಬೀಬುಲ್ಲಾ ಕಣ್ಣೂರ್,ಅಸಂಘಟಿತ ಕಾರ್ಮಿಕ ಬ್ಲಾಕ್ ಅಧ್ಯಕ್ಷ ಮೆಲ್ವಿನ್ ಮಂತೆರೋ,ಹಿರಿಯ ಮುಖಂಡ ಗಂಗಾಧರ ರೈ ಕುಯ್ಯರ್,ಇಸ್ಮಾಯಿಲ್ ಘಟ್ಟಮನೆ,ಬೂತ್ ಅಧ್ಯಕ್ಷ ಅಬ್ದುಲ್ಲ ಹಾಜಿ ಘಟ್ಟಮನೆ,ಹಮೀದ್ ಸನ್ಯಾಸಿಗುಡ್ಡೆ,ತಾರನಾಥ ರೈ,ಇಕ್ಬಾಲ್ ಸಾರಫುನಿ, ದೀಕ್ಷಿತ್, ನಾರಾಯಣ ಪಾಟಾಳಿ, ಯಾಕೂಬ್ ತೋಟ,ಹಾರೀಶ್ ಬೋಲೋಡಿ,ಅಬೂಬಕ್ಕರ್,ಗ್ರಾಮ ಪಂಚಾಯಿತಿ ಸದಸ್ಯೆ ಅಸ್ಮ ಇಬ್ರಾಹಿಂ ಉಪಸ್ಥಿತರಿದ್ದರು. ವಲಯ ಕಾರ್ಯದರ್ಶಿ ಅಶ್ರಫ್ ಸಾರಫುನಿ ಸ್ವಾಗತಿಸಿ ವಂದಿಸಿದರು.