ಮಂಗಳೂರು: ಬಜ್ಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 17.54 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಅ.12 ರಂದು ನಡೆದಿದೆ.
ಕಾಸರಗೋಡಿನ ಪ್ರಯಾಣಿಕರೊಬ್ಬರು ದುಬೈನಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಅ.12 ರ ಮುಂಜಾನೆ ಬಂದಿಳಿದಿದ್ದು, ತಪಾಸಣೆ ವೇಳೆ ಈತ ೨೪ ಕ್ಯಾರೆಟ್ ನ 364 ಗ್ರಾಂ ತೂಕದ 17.54 ಲಕ್ಷ ಮೌಲ್ಯದ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಗಮ್ ನೊಂದಿಗೆ ಬೆರೆಸಿ ಕಂದು ಬಣ್ಣದ ಹಾಳೆಯಲ್ಲಿ ಬಚ್ಚಿಡಲಾಗಿತ್ತು. ಶೀಟ್ ಅನ್ನು ಟ್ರಾಲಿಯ ಎರಡು ಪದರಗಳ ನಡುವೆ ಇರಿಸಲಾಗಿತ್ತು. ಕಸ್ಟಮ್ ಅಧಿಕಾರಿಗಳು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.