ಕಲೆ ಅನ್ನೋದು ಎಲ್ಲರಿಗೂ ಒಲಿಯುವಂತದ್ದಲ್ಲ, ಹಾಗೆಯೇ ಕಲಾ ಸರಸ್ವತಿಯೂ ಒಲಿದರೇ ಅದಕ್ಕೆ ಬೇರೆ ಯಾವುದೇ ಸರಿಸಾಟಿಯಿಲ್ಲ ಅದೇ ರೀತಿ ಇಲ್ಲೊಂದು ಯುವತಿಗೆ ಕಲಾ ಸರಸ್ವತಿಯು ತನ್ನ ಕೃಪಾಕಟಾಕ್ಷವನ್ನು ಬೀರಿದ್ದಾರೆ…
ಕಲೆಯನ್ನು ತನ್ನ ಜೀವನದ ಭಾಗವನ್ನಾಗಿ ಮಾಡಿಕೊಂಡಿರುವ ಈ ಯುವತಿ ಚಿತ್ರಕಲೆಯಲ್ಲಿ ಹೊಸ ಛಾಪನ್ನು ಮೂಡಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಅಲಂಗಾರು ನಿವಾಸಿ ಚಿದಾನಂದ ಮತ್ತು ಹೇಮಾಲತಾ ದಂಪತಿಗಳ ಪುತ್ರಿ ‘ಅರ್ಪಿತಾ ಆಚಾರ್ಯ’ ರವರೇ ಚಿತ್ರಕಲೆಯಲ್ಲಿ ಹೊಸ ಛಾಪನ್ನು ಮೂಡಿಸುತ್ತಿವ ಚಿತ್ರಕಲಾ ಕಲಾವಿದೆ..ಈಕೆ ಕುಂಚ ಹಿಡಿದು ನಿಂತ್ರೆ ಅರಳುತ್ತೆ ಅದ್ಬುತ ಚಿತ್ರ.
ಬಾಲ್ಯದಿಂದಲೇ ಬಣ್ಣಗಳಿಗೆ ಮನಸೋತ ಈಕೇ ಪೆನ್ಸಿಲ್ ಪೈಂಟಿಂಗ್, ಫೇಸ್ ಪೈಂಟಿಂಗ್, ಆಯಿಲ್ ಪೈಂಟಿಂಗ್, ಚುಕ್ಕೆ ಪೈಂಟಿಂಗ್,ಸ್ಟೋನ್ ಪೈಂಟಿಂಗ್ ನಂತಹ ಒಂದಕ್ಕಿಂತ ಒಂದು ಅದ್ಬುತವಾಗಿರುವಂತಹ ಪೈಂಟಿಂಗ್ ಗಳನ್ನು ತನ್ನ ಕಲಾ ಕುಂಚದಲ್ಲಿ ಅರಳಿಸುತ್ತಾಳೆ.
ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಅರ್ಪಿತಾ ಆಚಾರ್ಯ ಚಿತ್ರಕಲೆ ಮಾತ್ರವಲ್ಲದೇ ಹಾಡುಗಾರಿಕೆ, ನೃತ್ಯದಲ್ಲಿಯೂ ನೈಪುಣ್ಯತೆಯನ್ನು ಹೊಂದಿದ್ದಾರೆ. ಕಲೆಯ ಜೊತೆ ತನ್ನ ಬದುಕನ್ನು ಸಾಗಿಸುತ್ತಿರುವ ಕಲಾಗಾರ್ತಿ ಅರ್ಪಿತಾ ಆಚಾರ್ಯ ಇನ್ನಷ್ಟು ಸಾಧನೆಗಳನ್ನು ಮಾಡುತ್ತಾ, ಕಲಾಜಗತ್ತಿನಲ್ಲಿ ಎತ್ತರದ ಸ್ಥಾನಕ್ಕೇರಲಿ ಎಂಬುದು ನಮ್ಮ ಆಶಯ…