ಬೆಳ್ತಂಗಡಿ: ಬೈಕಿನಲ್ಲಿ ಬಂದ ಕಳ್ಳನೋರ್ವ ಮನೆಯೊಳಗಿದ್ದ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾದ ಘಟನೆ ಓಡಿಲ್ನಾಳ ಗ್ರಾಮದ ಶಾಲೆ ಬಳಿ ಅ.19 ರಂದು ಸಂಜೆ ನಡೆದಿದೆ.
ಓಡಿಲ್ನಾಳ ಗ್ರಾಮದ ಶಾಲೆ ಬಳಿ ವಾಸವಿರುವ ಉಮನಾಥ ಮೂಲ್ಯ ರವರ ಮನೆ ಬಳಿ ಅವರ ಪತ್ನಿ ಕಮಲ ರವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಳವುಗೈದು ಪರಾರಿಯಾಗಿದ್ದಾನೆ.
ಕಳ್ಳವುಗೈದ ಆರೋಪಿಯನ್ನು ಒರಿಸ್ಸಾ ನಿವಾಸಿಯಾಗಿರುವ ಅಮೋಶ್ ಎನ್ನಲಾಗಿದೆ.
ಕಳವುಗೈದು ಪರಾರಿಯಾಗುತ್ತಿದ್ದ ಈತನನ್ನು ಕಂಡ ಸ್ಥಳೀಯರು ಕೂಡಲೇ ಹಿಡಿದು ಪೋಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.