ಮೈಸೂರು: ತಂದೆ ಮತ್ತು ತಂದೆಯ ಪ್ರೇಯಸಿಯನ್ನು ಮಗನೇ ಹತ್ಯೆಗೈದ ಘಟನೆ ಮೈಸೂರು ಹೊರವಲಯದ ಶ್ರೀ ನಗರದಲ್ಲಿ ನಡೆದಿದೆ.
ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದ ದುರ್ದೈವಿಗಳು.
ಮಗನಿಂದಲೇ ತಂದೆ ಹಾಗೂ ತಂದೆಯ ಜೊತೆಗಿದ್ದ ಮಹಿಳೆಯನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಪ್ರಕಾಶ್ ಕೆ.ಜಿ ಕೊಪ್ಪಲು ನಿವಾಸಿಯಾಗಿರುವ ಆರೋಪಿ ಸಾಗರ್ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.
ಆರೋಪಿ ಸಾಗರ್
ಮೈಸೂರಿನ ಶ್ರೀನಗರದ ನಿವಾಸಿ ಲತಾ ಮನೆಗೆ ನುಗ್ಗಿ ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಮೊದಲು ತಂದೆಯನ್ನ ಮಚ್ಚಿನಿಂದ ಕೊಲೆ ಮಾಡಿರುವ ಮಗ ಸಾಗರ್, ಬಳಿಕ ಲತಾಳನ್ನು ಕೊಲೆ ಮಾಡಿದ್ದಾನಂತೆ. ಈ ವೇಳೆ ಆರೋಪಿಯನ್ನು ತಡೆಯಲು ಮುಂದಾದ ಲತಾ ಪುತ್ರ ನಾಗಾರ್ಜುನ ಎಂಬಾತನ ಮೇಲೂ ಸಾಗರ್ ಹಲ್ಲೆ ನಡೆಸಿದ್ದಾನಂತೆ. ಸದ್ಯ ಗಾಯಗೊಂಡಿರುವ ನಾಗಾರ್ಜುನ ಆಸ್ಪತ್ರೆ ದಾಖಲಾಗಿದ್ದು, ದಕ್ಷಿಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಾಗರ್ನನ್ನು ಸೆರೆಹಿಡಿಯಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.