ವಿಟ್ಲ: ನಿನ್ನೆ ಸುರಿದ ಭಾರೀ ಮಳೆಗೆ ಮನೆಗೆ ಸಿಡಿಲು ಬಡಿದು ಮೂವರು ಗಾಯಗೊಂಡು ಮನೆಯೂ ಹಾನಿಗೊಳಗಾದ ಘಟನೆ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕಲ್ಲೆಂಚಿನಪಾದೆ ಎಂಬಲ್ಲಿ ನಡೆದಿದೆ.
ಕಲ್ಲೆಂಚಿನಪಾದೆ ಬಳಿಯ ಶೀನ ರವರಿಗೆ ಸೇರಿದ ಮನೆಗೆ ಸಿಡಿಲು ಬಡಿದಿದ್ದು, ಇದರಿಂದ ಶೀನ ,ಅವರ ಪತ್ನಿ ಸುಶೀಲ, ಮಕ್ಕಳಾದ ವಿದ್ಯಾ ಮತ್ತು ವಿನಯ ರವರು ಗಾಯಗೊಂಡಿದ್ದಾರೆ.
ಸಿಡಿಲಿನ ತೀವ್ರತೆಗೆ ಗೋಡೆ ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು, ವಿದ್ಯುತ್ ಸಂಪರ್ಕ, ವಯರ್, ವಿವಿಧ ಉಪಕರಣಗಳು ಸುಟ್ಟುಹೋಗಿದೆ.




























