ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮುಖಂಡ, ಮ್ಯಾಗ್ನಮ್ ಇಂಟರ್‌ಗ್ರಾಫಿಕ್ಸ್ ಜಾಹೀರಾತು ಸಂಸ್ಥೆ ಸ್ಥಾಪಕ ಸುಧೀರ್ ಘಾಟೆ ಅ.22 ರಂದು ನಿಧನರಾದರು.
1991ರ ತನಕ ಕಾಂಗ್ರೇಸ್ ತೆಕ್ಕೆಯಲ್ಲಿದ್ದ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೆಲುತಿದ್ದ ಜನಾರ್ಧನ ಪೂಜಾರಿಗೆ ಮೊದಲ ಸೋಲುನಿಸಿದ ವ್ಯಕ್ತಿ ಎಂದರೇ ಅದು ಧನಂಜಯ ಕುಮಾರ್. ಇವರ ಗೆಲುವಿಗಾಗಿ ಹಲವು ಸಮಾವೇಶ, ಸಭೆ, ಬೂತ್ ಸಮಿತಿ ಮಾಡಿ ಗೆಲುವಿನ ರುವಾರಿ ಆದವರು ಆಗಿನ ಜಿಲ್ಲಾ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಸುದೀರ್ ಘಾಟೆ.
ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿಯ ಯಾರೇ ರಾಷ್ಟ್ರೀಯ ನಾಯಕ ನಾಯಕರು ಬಂದರು ಸುದೀರ್ ಘಾಟೆಯ ಮನೆಗೆ ಮೊದಲು ಬರುತ್ತಿದ್ದರು. ನಂತರ ‘ಮ್ಯಾಗ್ನಮ್ ಇಂಟರ್ ಗ್ರಾಫಿಕ್ಸ್’ ಎಂಬ ಜಾಹಿರಾತು ಸಂಸ್ಥೆ ಸ್ಥಾಪಿಸಿ ಅದನ್ನು ದೇಶದ ಅತ್ಯುನ್ನತ ಸಂಸ್ಥೆಯಾಗಿ ಮಾಡಿದರು. ದೇಶದ ಹಲವು ಪ್ರಮುಖ ನಗರಗಳಲ್ಲಿ ಇದರ ಶಾಖೆ ಪ್ರಾರಂಭಿಸಿದರು.
ಘಾಟೆ ವಿ.ಆರ್.ಎಲ್ ಸಂಸ್ಥೆ ಸಹಿತ ಹಲವು ಸಂಸ್ಥೆಗಳ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು.ನಂತರ ಮ್ಯಾಗ್ನಮ್ ಸಂಸ್ಥೆಯ ಕೆಲವೊಂದು ಕಾರಣಗಳಿಂದ ಆರ್ಥಿಕ ಕಾರಣಗಳಿಂದ ಬಾಗಿಲು ಹಾಕಿತು. ಆರೋಗ್ಯ ಸಂಬಂಧಿ ಕಾಯಿಲೆಯಿಂದ ನರಳುತಿದ್ದ ಘಾಟೆ ಅ.22ರಂದು ಕೊನೆಯುಸಿರೆಳೆದರು. ಪಾರ್ಥಿವ ಶರೀರವನ್ನು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಕೊಡಿಯಾಲ್‌ಬೈಲ್‌ನ ಎಂಜಿ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ಎಂದು ತಿಳಿದು ಬಂದಿದೆ.




























