ಮಂಗಳೂರು: ದೀಪಕ್ ರಾವ್ ಕೊಲೆ ಪ್ರಕರಣದ ಸಾಕ್ಷಿಗಳು ಹಾಗೂ ಸ್ಥಳೀಯ ಕಾರ್ಪೋರೇಟರ್ ಕೊಲೆಗೆ ಸಂಚು ರೂಪಿಸಿದ್ದಾರೆಂಬ ಆರೋಪದಡಿಯಲ್ಲಿ ಪಿಂಕಿ ನವಾಜ್ ಹಾಗೂ ಆತನ ತಂಡವನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ದುಷ್ಕರ್ಮಿಗಳಿಂದ ಹತ್ಯೆಯಾದ ದೀಪಕ್ ರಾವ್ ಹೆಸರಿನಲ್ಲಿ ಸುರತ್ಕಲ್ ಬಸ್ ಸ್ಟಾಂಡ್ ಗೆ ಆತನ ಹೆಸರಿಟ್ಟಿದ್ದರು. ಇದರ ಉದ್ಘಾಟನೆಯನ್ನು ಸ್ಥಳೀಯ ಶಾಸಕ ಭರತ್ ಶೆಟ್ಟಿ ನೆರವೇರಿಸಿದ್ದರು. ಇದಕ್ಕೆ ಆತನ ಕೊಲೆ ಆರೋಪದಲ್ಲಿ ಬಂಧನಕೊಳಪಟ್ಟು ನಂತರ ಜಾಮೀನಿನ ಮೂಲಕ ಹೊರಗಿರುವ ಆರೋಪಿ ಪಿಂಕಿ ನವಾಜ್ ಬಸ್ ಸ್ಟ್ಯಾಂಡ್ ಉದ್ಘಾಟನೆ ನಡೆಸದಂತೆ ತೆರೆಮರೆಯಲ್ಲಿ ಅಡ್ಡಗಾಲು ಹಾಕಿದ್ದನು ಎಂಬ ಆರೋಪವೂ ಇದೆ.
ಇದರ ಮುಂದುವರಿದ ಭಾಗವಾಗಿ ‘ಲೋಕಂಡ್ವಾಲ’ ಎಂಬ ವಾಟ್ಸಪ್ ಗ್ರೂಪಿನಲ್ಲಿ ಸ್ಥಳೀಯ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆಯವರನ್ನು ಕೊಲೆಗೆ ಸಂಚು ಹೂಡುವುದು ಜೊತೆಗೆ ಶಾಂತಿ ಕದಡಲು ಯತ್ನ ನಡೆಸಿದ ಆರೋಪವಿದೆ. ಈ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರಿಂದ ಪಿಂಕಿ ನವಾಜ್ ಸೇರದಂತೆ ಐದು ಜನರ ಬಂಧನವಾಗಿದೆ. ಸದ್ಯ ಈ ಸಂಚಿನ ಆಡಿಯೋ ವಾಯ್ಸ್ ಲೀಕ್ ಆದ ಬಳಿಕ ಬಂಧನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.